ಬೆಂಗಳೂರು, ಡಿಸೆಂಬರ್ 20: ಸೋಷಿಯಲ್ ಮೀಡಿಯಾದಲ್ಲಿ ಮೈ ತುಂಬ ಬಂಗಾರ ಧರಿಸಿ ವೈರಲ್ ಆಗಿದ್ದ ದಾಸ ಕಿಂಗ್ ಮೇಕರ್ ವಿರುದ್ಧ ಇದೀಗ ರೌಡಿ ಶೀಟ್ (rowdy sheet) ತೆರೆಯಲಾಗಿದೆ. ಯಲಹಂಕ ಹಾಗೂ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಸಾಲು ಸಾಲು ದೂರು ಕೇಳಿ ಬಂದ ಹಿನ್ನೆಲೆ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ದಾಸನ ಮೇಲೆ ನಾನ್ ಲೋಕಲ್ ರೌಡಿ ಶೀಟ್ ತೆರೆಯಲಾಗಿದೆ.
ಎಂಎಲ್ಎ ಸಂಬಂಧಿ ರಾಮಮೂರ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಮಹಿಳೆಯ ಜಮೀನಿನ ವಿಚಾರವಾಗಿ ಧಮ್ಕಿ ಹಾಕಲು ಸುಪಾರಿ ಪಡೆದಿದ್ದ ದಾಸ, ಹುಡುಗರನ್ನು ಕಳುಹಿಸಿ ಮಹಿಳೆ ಮೇಲೆ ಹಲ್ಲೆ ಮಾಡಿಸಿ ಜಾತಿ ನಿಂದನೆ ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ಕುರಿತು ಮಹಿಳೆ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇದೇ ಪ್ರಕರಣದಲ್ಲಿ ದಾಸ ಎ2 ಆರೋಪಿಯಾಗಿದ್ದ.
ಇದೇ ರೀತಿ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲೂ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಚಿಕ್ಕಜಾಲ ಪೊಲೀಸರು ದಾಸ ಮೇಲೆ ರೌಡಿಶೀಟ್ ತೆರೆದಿದ್ದಾರೆ.
ಮೈ ತುಂಬ ಬಂಗಾರ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ದಾಸ, ಮೈತುಂಬ ಗೋಲ್ಡು ಸುತ್ತಲೂ ಹುಡುಗರು, ದೊಡ್ಡ ದೊಡ್ಡವರ ಜೊತೆ ಫೋಟೋದಲ್ಲಿ ಫಾಲೋವರ್ಸ್ ಬೆಳೆಸಿಕೊಂಡಿದ್ದ. ಬೇರೆಯವರ ಪ್ರಾಪರ್ಟಿ ಗಲಾಟೆ ನಡುವೆ ಯುವಕರ ಕಳುಹಿಸಿಕೊಟ್ಟ ಆರೋಪ ಹಿನ್ನಲೆ ಬಂಧನವಾಗಿದ್ದ. ಸದ್ಯ ಈತನ ಪೂರ್ವ ಪರ ಹಾಗೂ ಆತನ ಬಗ್ಗೆ ಯಲಹಂಕ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಹಿಂದೆ ಸಹ ಸಾಕಷ್ಟು ಜನರಿಗೆ ಬೆದರಿಕೆ ಹೊಡ್ಡಿ ಆಕ್ರಮವಾಗಿ ಹಣ ಗಳಿಸಿರುವ ಶಂಕೆ ವ್ಯಂಕ್ತವಾಗಿದೆ. ಯಲಹಂಕ ಸುತ್ತ ಮುತ್ತ ರಿಯಲ್ ಎಸ್ಟೇಟ್ ಬಿಲ್ಡಿರ್ಗಳನ್ನು ಬೆದರಿಸಿರುವ ಆರೋಪ ಮಾಡಲಾಗಿದೆ. ಹೀಗಾಗಿ ದಾಸನ ಮೊಬೈಲ್ ಫೋನ್ನ್ನು ಮಿರರ್ ಸ್ಕ್ರೀನ್ ಮಾಡಲು ಸಿಐಡಿಗೆ ರವಾನೆ ಮಾಡಲಾಗಿದೆ.
ಮೊದಲಿಗೆ ತನ್ನ ಮೊಬೈಲ್ ಪೊಲೀಸರಿಗೆ ನೀಡಲು ಒಪ್ಪದ ದಾಸ, ನಂತರ ತನಿಖೆಗೆ ಅವಶ್ಯಕತೆ ಹಿನ್ನೆಲೆ ಮೊಬೈಲ್ ಸೀಜ್ ಮಾಡಿದ್ದಾರೆ. ಸದ್ಯ ಯಲಹಂಕ ಪೊಲೀಸರಿಂದ ತನಿಖೆಯಲ್ಲಿ ಮೊಬೈಲ್ನಲ್ಲಿ ದೊಡ್ಡ ಬಿಲ್ಡರ್ಗಳ ಸಂಪರ್ಕ ನಂಬರ್ಗಳು ಪತ್ತೆ ಆಗಿವೆ.