ಹುಬ್ಬಳ್ಳಿ:- ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲಿಗೆ ಹದ್ದುಬಸ್ತಿನಲ್ಲಿದ್ರೆ ಒಳ್ಳೆಯದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬೊಜ್ಜಿನಿಂದ ಕ್ಯಾನ್ಸರ್ ಅಪಾಯ!? ಸಮೀಕ್ಷೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!
ಪ್ರಧಾನಿ ಅವರನ್ನು ಪುಡಾರಿ ಎಂದು ಕರೆದಿರುವ ಸಿಎಂ ಗೆ ಟಾಂಗ್ ಕೊಟ್ಟ ಜೋಶಿ, ಓರ್ವ ಪ್ರಧಾನಿಗೆ ಪುಡಾರಿ ಇತ್ಯಾದಿಯಾಗಿ ಮಾತನಾಡುವುದು ಸರಿಯಲ್ಲ. ಖರ್ಗೆ ಅವರು ಗ್ಯಾರಂಟಿ ಬಗ್ಗೆ ಹೇಳಿದ್ದಾರೆ. ಗ್ಯಾರಂಟಿಯಿಂದ ಅಭಿವೃದ್ಧಿ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ನಿಮ್ಮ ಶಾಸಕರೇ ನಿಮ್ಮ ವಿರುದ್ಧ ಮಾತನಾಡಿದ್ದಾರೆ. ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಬಿಆರ್ ಪಾಟೀಲ್, ಮತ್ತಿತರರು ಹೇಳಿದ್ದಾರೆ. ನಿಮ್ಮ ಶಾಸಕರೇ ಹೇಳುತ್ತಿರುವಾಗ ಪ್ರಧಾನ ಮಂತ್ರಿಗಳು ಅದರ ಬಗ್ಗೆ ಮಾತನಾಡಿದ್ದಾರೆ. ಸೌಜನ್ಯಯುತವಾಗಿ ಉತ್ತರ ಕೊಡಿ ಎಂದು ಕಿಡಿಕಾರಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವಿಚಾರವಾಗಿ ಮಾತನಾಡಿ, ಖರ್ಗೆ ಅವರು ಅತ್ಯಂತ ಹಿರಿಯ ನಾಯಕರು. ರಾಜಕೀಯ ಭಿನ್ನಾಭಿಪ್ರಾಯ ಹೊರತುಪಡಿಸಿ, ಅವರೊಂದಿಗೆ ವೈಯಕ್ತಿಕ ಸಂಬಂಧ ಚೆನ್ನಾಗಿದೆ. ಅತ್ಯಂತ ಕಷ್ಟದಲ್ಲಿ ಬೆಳೆದು ಬಂದು, ಈ ಹಂತಕ್ಕೆ ಮುಟ್ಟಿದವರು. ಕಾಂಗ್ರೆಸ್ ಪಕ್ಷ ಮೊದಲು ಅಶೋಕ್ ಗೆಹ್ಲೋಟ್ ಅವರನ್ನ ಅಧ್ಯಕ್ಷರನ್ನ ಮಾಡಲು ಹೊರಟಿದ್ದರು. ಖರ್ಗೆ ಅವರು ಗಾಂಧಿ ಕುಟುಂಬದವರ ಮೊದಲ ಆಯ್ಕೆ ಆಗಿರಲಿಲ್ಲ. ಗೆಹ್ಲೋಟ್ ಹೈಕಮಾಂಡ್ಗೆ ಕೈಕೊಟ್ಟು ರೆಬಲ್ ಆದ್ರೂ ನಂತರ ಅನಿವಾರ್ಯವಾಗಿ ಗಾಂಧಿ ಕುಟುಂಬ ಖರ್ಗೆ ಅವರನ್ನ ಆಯ್ಕೆ ಮಾಡಿತು. ಈಗ ಅವರೇ ಹೇಳಿರುವ ಪ್ರಕಾರ, ಪ್ರತಿಯೊಂದಕ್ಕೂ ಗಾಂಧಿ ಕುಟುಂಬದ ಮಾತು ಕೇಳುವಂತಾಗಿದೆ. ದೊಡ್ಡ ಪ್ರಜಾಪ್ರಭುತ್ವ ಸಂವಿಧಾನವನ್ನು ತೆಗೆದುಕೊಂಡು ತಿರುಗಾಡುವವರು ಬೇರೆಯವರಿಗೆ ಎಷ್ಟು ಗೌರವ ಕೊಡುತ್ತಾರೆ ಎಂದು ತಿಳಿಯುತ್ತದೆ ಎಂದರು.
ವಕ್ಫ್ ಆಸ್ತಿ ಹೆಸರಲ್ಲಿ ಕಬಳಿಕೆ ಹುನ್ನಾರ ನಡೆದಿದೆ. ಇದರ ವಿರುದ್ಧ ಸೋಮವಾರ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ. ವಕ್ಫ್ ಆಸ್ತಿ ನಮೂದು ಮಾಡಿರುವ ಜಾಗದಲ್ಲಿ ಮನೆಗಳಿವೆ. ಅವುಗಳನ್ನು ವಿಭಾಗ ಮಾಡಿಕೊಳ್ಳುವುದು ಕಷ್ಟ. ವಕ್ಫ್ ಎಂದು ನಮೂದಾದ ಆಸ್ತಿ ಮೇಲೆ ಸಾಲ ಪಡೆಯೋದು ಕಷ್ಟ. ಅದನ್ನು ಮಾರಾಟ ಮಾಡುವುದಕ್ಕೂ ಆಗುವುದಿಲ್ಲ. ಇಷ್ಟೆಲ್ಲ ಗೊಂದಲಗಳಿದ್ದರೂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ನೋಟಿಸ್ ಮತ್ತು ಕಲಂ 11ರಲ್ಲಿ ನಮೂದು ಆಗಿರುವುದು ಗಂಭೀರ ವಿಷಯವಾಗಿದೆ. ಜನ ತಮ್ಮ ಪಹಣಿ ಪರಿಶೀಲನೆ ಮಾಡಿಕೊಳ್ಳಲಿ. ವಕ್ಫ್ ಕಾನೂನು ಹೆಸರಲ್ಲಿ ದುರ್ಬಳಕೆ ನಡೆದಿದೆ ಎಂದಿದ್ದಾರೆ.