ಹುಬ್ಬಳ್ಳಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ಆಗಿದ್ದು ಇದು ಸರ್ಕಾರಕ್ಕೆ ಗೊತ್ತಿಲ್ವಾ ಆದ್ದರಿಂದ ಇದು ಮಂತ್ರಿಗಳ ಉಡಾಫೆಯಿಂದಲೇ ನಡೆತಾ ಇದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ
ಹೇಳಿದರು.
ನಗರದಲ್ಲಿಂದು ವಿಮಾನ ನಿಲ್ದಾಣ ಆವರಣದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಈಗ ಅಧಿಕಾರಿಗಳು ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ ಎಂದು. ಆದರೆ ಇಡಿ ಇಲಾಖೆಯ ಆದ್ದರಿಂದ ಮುಖ್ಯಮಂತ್ರಿಗಳಿಗೆ ಇಡಿ ಅಧಿಕಾರಿಗಳ ಮೂಲಕ ಮಂತ್ರಿಗಳ ಹೆಸರನ್ನು ಹೇಳಸತಾ ಇದ್ದಾರೆ ಎಂಬ ಮಾಹಿತಿ ಮುಖ್ಯಮಂತ್ರಿಗಳಿಗೆ ಬಂದಿದೆ ಎನ್ನುವುದನ್ನ ಸ್ಪಷ್ಟಪಡಿಸಲಿ ಎಂದರು.
KRS ಡ್ಯಾಂನಿಂದ ಕಾವೇರಿ ನದಿಗೆ 10,000 ಕ್ಯುಸೆಕ್ಗೂ ಅಧಿಕ ನೀರು ಬಿಡುಗಡೆ
ನಾನು ಇಂದ ಉತ್ತರ ಕನ್ನಡ, ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಬೇಟಿ ಕೊಡತಾ ಇದ್ದೇನೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಶಿರೂರ ಭಾಗದಲ್ಲಿ ಭಾರಿ ಹಾನಿಯಾಗಿದೆ. ಆದ್ದರಿಂದ ಇಂದು ಮತ್ತು ನಾಳೆ ಸಹ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಇನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನೀಯಾಗಿದ್ದು ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಕೇವಲ ಭ್ರಷ್ಟಾಚಾರ ದಲ್ಲಿ ಯೇ ಸರ್ಕಾರ ಭಾಗಿಯಾಗಿದೆ. ಕೇವಲ ಭ್ರಷ್ಟಾಚಾರವೇ ಇವರಿಗೆ ಪ್ರಮುಖ ಆಗಿದೆ. ಇನ್ನು ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರೇದೇ ಪ್ರಮುಖ ಪಾತ್ರ ಇದೆ ಎಂದು ಗಂಭೀರ ಸ್ವರೂಪದ ಆರೋಪ ಮಾಡಿದರು.