“ಛಾವಾ” ಮರಿ ಸಿಂಹದ ಘರ್ಜನೆ ಇದೀಗ ಬಾಲಿವುಡ್ ಗಲ್ಲಾಪೆಟ್ಟಿಗೆ ಶೇಖ್ ಆಗ್ತಿದೆ.. ಹೌದು, ಬರೋಬ್ಬರಿ ರಿಲೀಸ್ ಆದ ಏಳನೇ ದಿನಕ್ಕೆ 270 ಕೋಟಿ ಗಳಿಕೆ ಕಂಡಿದೆ.. ಎಸ್.. ವಿಕ್ಕಿ ಕೌಶಲ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಬ್ಸಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದ್ದು, ಅಜಯ್ ದೇವಗನ್ ಆಭಿನಯದ ಸಿಂಗ್ಮ್ ಅಗೈನ್ ಚಿತ್ರದ ದಾಖಲೆಯನ್ನು ಬ್ರೇಕ್ ಮಾಡಿದೆ.
ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ರಾವ್ ಜೀವನಾಧರಿತ ಚಿತ್ರ ಛಾವಾ ರಿಲೀಸ್ ಆದ ಏಳೇ ದಿನಗಳಲ್ಲಿ 270 ಕೋಟಿ ಗಳಿಕೆ ಕಂಡಿದ್ದು, 2025ರ ಬಾಲಿವುಡ್ನ ಮೊದಲ ಹಿಟ್ ಚಿತ್ರವಾಗಿ ದಾಖಲೆ ಬರೆದಿದೆ.
ಪ್ರತಿಯೊಂದು ಸಿನಿಮಾವು ಸಹ ಬಿಡುಗಡೆಯಾದ ಮೊದಲ ವಾರದಲ್ಲಿ ಓಳ್ಳೆ ಕಲೆಕ್ಷನ್ ಮಾಡಿದ್ರೆ, ಛಾವಾ ನಂತರದ ವಾರದಲ್ಲಿ ಸಖತ್ ಸೌಂಡ್ ಮಾಡ್ತಿದ್ದು, ಪ್ರೇಕ್ಷಕರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳನೇ ನೀಡ್ತಿದ್ದಾರೆ.. ಜೊತೆಗೆ ಗೋವಾ ಸರ್ಕಾರ ಛಾವಾ ಚಿತ್ರಕ್ಕೆ ತೆರಿಗೆ ವಿನಾಯ್ತಿಯನ್ನು ಸಹ ನೀಡಿದೆ.
ಫೆಬ್ರವರಿ 14ರಂದು ಬಿಡುಗಡೆಯಾಗಿದ್ದ ‘ಛಾವ’ ಸಿನಿಮಾದಲ್ಲಿ ಛತ್ರಪತಿ ಶಂಭಾಜಿ ಮಹಾರಾಜ್ ಜೀವನದ ಕಥೆ ಇದೆ. ಆ ಪಾತ್ರವನ್ನು ವಿಕ್ಕಿ ಕೌಶಲ್ ಅವರು ನಿಭಾಯಿಸಿದ್ದಾರೆ. ವಿಕ್ಕಿ ಕೌಶಲ್ ಅವರ ಛಾವಾ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಚಿತ್ರವಾಗಿದೆ.. ಶಂಭಾಜಿ ಪತ್ನಿ ಯೇಸುಬಾಯಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ನ್ಯಾಯ ಒದಗಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಮೆಡಾಕ್ ಫಿಲ್ಮ್ಸ್’ ಮೂಲಕ ಈ ಚಿತ್ರ ನಿರ್ಮಾಣ ಆಗಿದ್ದು, ನಿರ್ಮಾಪಕರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ.