ಹುಬ್ಬಳ್ಳಿ ಧಾರವಾಡ : ನಗರದ ಬನಶಂಕರಿ ಬಡಾವಣೆಯ ವಿದ್ಯಾನಗರದಲ್ಲಿ ಕೊಂಕಣ್ ಮರಾಠ ಸಮಾಜದ ವತಿಯಿಂದ ಶಿವಾಜಿ ಮಹಾರಾಜರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಶ್ರೀ ರವಿ ನಾಯಕ ವಹಿಸಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮವನ್ನುಕಟ್ಟಿ ಭಾರತ ದೇಶದಲ್ಲೆಡೆ ಒಟ್ಟುಗೂಡಿಸಿದ ಮಹಾನ್ ವ್ಯಕ್ತಿ. ಅವರು ಕಿರಿಯ ವಯಸ್ಸಿನಲ್ಲಿದ್ದಾಗ ಹೋರಾಟದ ಮನೋವೃತ್ತಿ ಹೊಂದಿದ್ದವರು ಎಂದರು. ಮೊಘಲರ ವಿರುದ್ಧ ಹೋರಾಡಿ ಹೆಮ್ಮೆಟ್ಟಿಸಿದ್ದರು ಅವರ ಇತಿಹಾಸ ಎಂದಿಗೂ ಪ್ರಸ್ತುತ. ಶಿವಾಜಿ ಮಹಾರಾಜರು ಜಗತ್ತಿನ ಶ್ರೇಷ್ಠ ವ್ಯಕ್ತಿ ಅವರ ತತ್ವ ಆದರ್ಶಗಳನ್ನು ಇಂದಿನ ಯುವಕರು ಬಳಸಿಕೊಳ್ಳಬೇಕು ಎಂದು ಯುವಜನತೆಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುರೇಂದ್ರ ಗಾಂವಕರ್ ಹಾಗೂ ಅರುಣ್ ಕುಮಾರ ಸಾಲುಂಕೆ, ಸುನಿಲ್ ನಾಯ್ಕ್ ವಿನೋದ್ ಸೈಲ, ವಿನಾಯಕ ಗಾಂವಕಾರ, ರಾಜೀವ ನಾಯ್ಕ್ , ರಾಜಶೇಖರ ನಾಯ್ಕ್ ಸಾರ್ಥಕ ಕದಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.