ಚಿತ್ರದುರ್ಗದಲ್ಲಿ ಈಚೆಗೆ ನಡೆದ ಅಂತರ್ ಕಾನೂನು ಮಹಾವಿದ್ಯಾಲಯಗಳ ಚೆಸ್ ಪಂದ್ಯಾವಳಿಯಲ್ಲಿ ವಿಜಯಪುರದ ಅಂಜುಮನ್ ಕಾನೂನು ಮಹಾವಿದ್ಯಾಲಯದ ತಂಡ ತೃತೀಯ ಬಹುಮಾನ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯ ಹಾಗೂ ಚಿತ್ರದುರ್ಗ ಎಸ್ ಜೆ ಎಂ ಕಾನೂನು ಕಾಲೇಜಿನ ಸಹಯೋಗದಲ್ಲಿ ಅಂತರ್ ಕಾನೂನು ಮಹಾವಿದ್ಯಾಲಯಗಳ ಚೆಸ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಪಂದ್ಯಾವಳಿಯಲ್ಲಿ ಪುರುಷ ವಿಭಾಗದಲ್ಲಿ 37 ತಂಡ, 19ಮಹಿಳಾ ತಂಡಗಳು ಭಾಗಿಯಾಗಿದ್ದವು. ಪುರುಷ ವಿಭಾಗದಲ್ಲಿ ವಿಜಯಪುರದ ಅಂಜುಮನ್ ಕಾನೂನು ಮಹಾವಿದ್ಯಾಲಯದ ತಂಡ ತೃತೀಯ ಬಹುಮಾನ ಪಡೆದಿದ್ದಾರೆ. ಪ್ರಥಮ ಬಹುಮಾನ ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿವಿ ತಂಡ, ದ್ವಿತೀಯ ಸ್ಥಾನ ಬೆಂಗಳೂರಿನ ರಾಮಯ್ಯ ಕಾನೂನು ಕಾಲೇಜುಗಳ ಪಾಲಾಗಿದೆ. ನಾಲ್ಕನೇ ಬಹುಮಾನ ವಿವೇಕಾನಂದ ಕಾನೂನು ಕಾಲೇಜ್ ತೃತೀಯ ಬಹುಮಾನ ಪಡೆದ ಹಿನ್ನಲೆಯಲ್ಲಿ ಕಾಲೇಜಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು, ಜೊತೆಗೆ ತಂಡದಲ್ಲಿದ್ದ ಐದು ವಿದ್ಯಾರ್ಥಿಗಳಿಗೆ ಸನ್ಮಾನಿಸಿದ್ದಾರೆ.
ಗಮನಿಸಿ.. ಮಣ್ಣು ಪರೀಕ್ಷಾ ಕೇಂದ್ರ ತೆರೆಯಲು ಸರ್ಕಾರದಿಂದ ಸಿಗಲಿದೆ ಸಹಾಯಧನ! ಇಂದೇ ಅರ್ಜಿ ಸಲ್ಲಿಸಿ
ಕಾಲೇಜಿನ ಉಪನ್ಯಾಸಕರು ತೃತೀಯ ಸ್ಥಾನ ಪಡೆದ ತಂಡಕ್ಕೆ ಅಭಿನಂದಿಸಿದರು, ದೈಹಿಕ ಶಿಕ್ಷಣ ನಿರ್ದೇಶಕ ತೌಫಿಕ್ ಅಹ್ಮದ್ ಕೂಡಗಿ, ಹಾಗೂ ಕಾನೂನು ವಿದ್ಯಾರ್ಥಿ ವಸಂತ್ ಕುಮಾರ್ ನಾಯಕ ಮಾರ್ಗದರ್ಶನ, ಕಾನೂನು ವಿದ್ಯಾರ್ಥಿ ಸಮೀರ್ ನಾಯಕತ್ವದಲ್ಲಿ ತಂಡ ಗೆದ್ದಿದ್ದು, ಮುಂದಿನ ವರ್ಷದ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಅಂತ ತಂಡದ ನಾಯಕ ಸಮೀರ್ ಹೇಳಿದ್ದಾರೆ.