ಬೆಂಗಳೂರು: ಚೆನ್ನಗಿರಿ ಪ್ರಕರಣ ಸಂಬಂಧ ಈಗಾಗಲೇ ಕರ್ತವ್ಯ ನಿರ್ಲಕ್ಷ್ಯದಡಿ ಇನ್ಸ್ಪೆಕ್ಟರ್ ಹಾಗೂ ಡಿವೈಎಸ್ಪಿಯನ್ನು ಸಸ್ಪೆಂಡ್ ಮಾಡಿದ್ದಾರೆ. ತನಿಖಾ ವರದಿ ಏನು ಬರುತ್ತದೆ ಎಂಬುದನ್ನು ನೋಡೋಣ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ಸದಾಶಿವನಗರ ತಮ್ಮ ನಿವಾಸದ ಬಳಿ ಇಂದು ಮಾತನಾಡಿದ ಅವರು,
ಮೃತ ವ್ಯಕ್ತಿ ಮಟ್ಕಾ ಆಡಿಸುವುದರಲ್ಲಿ ಭಾಗಿಯಾಗಿದ್ದ. ಹೀಗಾಗಿ ಸ್ಟೇಷನ್ಗೆ ಕರೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಸಮಸ್ಯೆಯಾಗಿ ತೀರಿಕೊಂಡಿದ್ದಾರೆ. ಹಾರ್ಟ್ ಅಟ್ಯಾಕ್ ಆಗಿದೆಯಾ, ಲೋ ಬಿಪಿ ಆಯ್ತಾ ಎಂಬ ಮಾಹಿತಿ ಪೋಸ್ಟ್ ಮಾರ್ಟಂ ವರದಿ ಬಂದ ಬಳಿಕ ತಿಳಿಯಲಿದೆ. ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ” ಎಂದರು.
ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡೋ ಅಭ್ಯಾಸವಿದ್ಯಾ..? ಹಾಗಾದ್ರೆ ಇಂದೇ ಬಿಟ್ಟುಬಿಡಿ
ಪೊಲೀಸರಿಗೆ ಕಮಿಷನ್ ಕೊಡಲಿಲ್ಲ ಎಂಬ ಕಾರಣಕ್ಕೆ ಈ ಘಟನೆ ಆಗಿದೆ ಎಂಬ ಸ್ಥಳೀಯರ ಆರೋಪಕ್ಕೆ, “ತನಿಖೆ ಮಾಡಿದಾಗ ಗೊತ್ತಾಗಬೇಕು. ಆರೋಪ ನಿಜವೇ ಆಗಿದ್ದರೆ ಅಂಥವರನ್ನು ಕರ್ತವ್ಯದಿಂದ ವಜಾ ಮಾಡುತ್ತೇವೆ” ಎಂಬ ಭರವಸೆ ನೀಡಿದರು. ಪೊಲೀಸ್ ಠಾಣೆ ಮೇಲಿನ ದಾಳಿ ವಿಚಾರಕ್ಕೆ, “ಈಗ ಶಾಸಕರೇ ಪೊಲೀಸ್ ಠಾಣೆಗೆ ಹೋಗಿ ಗಲಾಟೆ ಮಾಡುತ್ತಾರೆ.
ಪೊಲೀಸರ ಮೇಲೆ ದಾಂಧಲೆ ಮಾಡುತ್ತಾರೆ. ಈ ರೀತಿಯಾದರೆ ಸಮಾಜದಲ್ಲಿ ಶಾಂತಿ ಹೇಗೆ ನೆಲೆಸುತ್ತೆ?. ಅದಕ್ಕೆ ಕಾನೂನನ್ನು ಯಾರು ಕೈಗೆ ತೆಗೆದುಕೊಳ್ಳಬಾರದು. ತೆಗೆದುಕೊಂಡವರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ. ಅವರು ಶಾಸಕರೇ ಆಗಿರಲಿ ಸಂಸದರೇ ಆಗಿರಲಿ, ಯಾರನ್ನೂ ಕೂಡ ಬಿಡುವುದಿಲ್ಲ. ಯಾರೇ ತಪ್ಪು ಮಾಡಿದರು ಕ್ರಮ ಆಗುತ್ತದೆ” ಎಂದರು.