ಬೆಂಗಳೂರು: 2023ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಹಾಗೂ ವಿರಾಟ್ ಅತಿ ಹೆಚ್ಚು ರನ್ ಸಿಡಿಸಿದ ಟಾಪ್ 2 ಆಟಗಾರರಾಗಿ ವಿಶ್ವ ಕ್ರಿಕೆಟ್ ನ ಗಮನ ಸೆಳೆದಿದ್ದಾರೆ.
ಗಾಯದ ಸಮಸ್ಯೆಯಿಂದ ಹೊರಬಂದ ನಂತರ ಕನ್ನಡಿಗ ಕೆ.ಎಲ್.ರಾಹುಲ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಇನ್ನು ಕೆಲವು ಆಟಗಾರರು ಐಪಿಎಲ್ ಹಾಗೂ ಸ್ಥಳೀಯ ಕ್ರಿಕೆಟ್ ನಲ್ಲಿ ಮಿಂಚು ಹರಿಸುವಲ್ಲಿ ಎಡವಿದ್ದರಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಮುಗ್ಗರಿಸಿದ್ದರೆ, ಇನ್ನೂ ಕೆಲವರು ಸಿಕ್ಕ ಅವಕಾಶವನ್ನು ಕೈಚೆಲ್ಲಿದ್ದಾರೆ. ಈ ವರ್ಷ ಟೀಮ್ ಇಂಡಿಯಾ ಪರ ಆಡಿ ಕಳಪೆ ಪ್ರದರ್ಶನ ತೋರಿದ ಟಾಪ್ 5 ಆಟಗಾರರ ವಿವರ ಇಲ್ಲಿದೆ.
ರಾಹುಲ್ ತ್ರಿಪಾಠಿ
ಟೀಮ್ ಇಂಡಿಯಾದ ಭವಿಷ್ಯದ ಫಿನಿಶರ್ ಎಂದೇ ಬಿಂಬಿಸಲಾಗಿದ್ದ ರಾಹುಲ್ ತ್ರಿಪಾಠಿ ಕೂಡ 2023ರಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾಗಿದ್ದಾರೆ. ಭಾರತ ತಂಡದ ಪರ ಆಡಿದ 5 ಟಿ20-ಐ ಪಂದ್ಯಗಳಲ್ಲಿ 19.40 ಸರಾಸರಿಯಲ್ಲಿ 97 ರನ್ ಗಳಿಸಿ ನಿರಾಸೆ ಮೂಡಿಸಿದ್ದರೆ
ಪೃಥ್ವಿ ಶಾ
2018ರಲ್ಲಿ ತಮ್ಮ ನಾಯಕತ್ವದಲ್ಲಿ ಅಂಡರ್ 19 ವಿಶ್ವಕಪ್ ಗೆದ್ದುಕೊಟ್ಟಿದ್ದ ಪೃಥ್ವಿ ಶಾ, ಐಪಿಎಲ್ ಟೂರ್ನಿಯಲ್ಲಿ ಕಳಪೆ ಫಾರ್ಮ್ ಹೊಂದಿ 8 ಪಂದ್ಯಗಳಿಂದ ಕೇವಲ 106 ರನ್ ಗಳಿಸಿದ್ದರು. ಇಂಗ್ಲೆಂಡ್ ನ ಕೌಂಟಿ ಕ್ರಿಕೆಟ್ ನಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ಉತ್ತಮ ಪ್ರದರ್ಶನ ತೋರಿದ್ದರು
ಇಶಾನ್ ಕಿಶನ್
ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದ ಮುಂಬೈ ಇಂಡಿಯನ್ಸ್ ನ ಆರಂಭಿಕ ಯುವ ಆಟಗಾರ ಇಶಾನ್ ಕಿಶನ್, ಟೀಮ್ ಇಂಡಿಯಾ ಪರ ಅದೇ ಪ್ರದರ್ಶನವನ್ನು ಹೊಮ್ಮಿಸಲು ಎಡವಿದ್ದರು. ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ 82 ರನ್ ಗಳಿಸಿ ಗಮನ ಸೆಳೆದಿದ್ದ ಇಶಾನ್ ಕಿಶನ್
ಚೇತೇಶ್ವರ್ ಪೂಜಾರ
ಟೆಸ್ಟ್ ಕ್ರಿಕೆಟ್ ನಲ್ಲಿ 3ನೇ ಕ್ರಮಾಂಕದಲ್ಲಿ ಅದ್ಭುತ ಇನಿಂಗ್ಸ್ ಕಟ್ಟಿದ್ದ ಚೇತೇಶ್ವರ್ ಪೂಜಾರ 2023ರಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು. ಕಳೆದ ವರ್ಷದಲ್ಲಿ ಆಡಿದ 5 ಪಂದ್ಯಗಳಲ್ಲಿ ಶತಕ ಗಳಿಸದೆ ನಿರಾಸೆ ಮೂಡಿಸಿದ್ದರು.
ಕೆಎಸ್ ಭರತ್
ಭಾರತ ತಂಡದಲ್ಲಿ ಭವಿಷ್ಯದ ವಿಕೆಟ್ ಕೀಪರ್ ಆಗುವ ಭರವಸೆ ಮೂಡಿಸಿದ್ದ ಕೆಎಸ್ ಭಭರತ್ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಹಾಗೂ ಐಸಿಸಿ 2ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಸ್ಥಾನ ಪಡೆದಿದ್ದರು