ಕನ್ನಡ 11 ಈಗ 13ನೇ ವಾರದ ಕ್ಯಾಪ್ಟನ್ ಆಗಿ ಭವ್ಯಾ ಗೌಡ ಆಯ್ಕೆಯಾಗಿದ್ದು, ಈ ಮೂಲಕ 14ನೇ ವಾರದ ಕ್ಯಾಪ್ಟನ್ ಆಗಿದ್ದಾರೆ. ಜೊತೆಗೆ 15ನೇ ವಾರದಲ್ಲಿ ಸೇವ್ ಆಗಿದ್ದಾರೆ. ಇನ್ನು 3 ವಾರದಲ್ಲಿ ಬಿಗ್ಬಾಸ್ ಫಿನಾಲೆ ನಡೆಯಲಿದೆ.
ಇದಕ್ಕೂ ಮುನ್ನ ಕ್ಯಾಪ್ಟನ್ ಆಗಿ ಇಮ್ಯೂನಿಟಿ ಪಡೆದು ಉಳಿದುಕೊಳ್ಳಲು ಸ್ಪರ್ಧಿಗಳು ಹೆಣಗಾಡುತ್ತಿದ್ದಾರೆ. ಈ ನಡುವೆ ಮನೆಯ ನೂತನ ಕ್ಯಾಪ್ಟನ್ ಆಗಿ ಮೂರನೇ ಬಾರಿಗೆ ಭವ್ಯಾ ಆಯ್ಕೆಯಾಗಿದ್ದು, ಮುಂದಿನ ವಾರ ಕೂಡ ನಾಮಿನೇಷನ್ನಿಂದ ಸೇಫ್ ಆಗಿ ಫಿನಾಲೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಬಿಗ್ ಬಾಸ್ ಸೀಸನ್ 11 ದಿನ ಕಳೆದಂತೆ ಸಾಕಷ್ಟು ಕುತೂಹಲದಿಂದ ಮೂಡಿ ಬರುತ್ತಿದೆ. ಫಿನಾಲೆಗೆ ಇನ್ನೇನೋ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ, ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ.
ವೀಕೆಂಡ್ ನಲ್ಲಿ ಕಳೆದ ವಾರ ನಡೆದ ತಪ್ಪುಗಳನ್ನು ಕಿಚ್ಚ ಸುದೀಪ್ ಅವರು ಇಂದು ಬಯಲಿಗೆಳೆದಿದ್ದಾರೆ. ಅಲ್ಲದೇ ಕ್ಯಾಪ್ಟನ್ ಆಗಿರುವ ಭವ್ಯಾಗೌಡರ ಮೋಸದ ಆಟದ ವಿಡಿಯೋವನ್ನು ತೋರಿದ್ದಾರೆ. ವಿಡಿಯೋ ನೋಡಿ ಉಳಿದ ಸ್ಪರ್ಧಿಗಳು ಶಾಕ್ ಆಗಿದ್ದು, ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದಾರೆ.
ಇನ್ನೂ ಬಿಗ್ ಬಾಸ್ ಮನೆಯಲ್ಲಿ ನಿನ್ನೆಯಿಂದ ಭವ್ಯಾ ಕ್ಯಾಪ್ಟನ್ಸಿ ಟಾಸ್ಕ್ ಬಗ್ಗೆಯೇ ಚರ್ಚೆ ಆಗುತ್ತಿದೆ. ಇಂದಿನ ವೀಕೆಂಡ್ ಎಪಿಸೋಡ್ನಲ್ಲಿಯೂ ಸುದೀಪ್ ಅವರು ಈ ಬಗ್ಗೆ ಮಾತನಾಡಿ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಎಸ್, ಕಳೆದ ಸಂಚಿಕೆಯಲ್ಲಿ ಬಿಗ್ಬಾಸ್ ರೆಸಾರ್ಟ್ ಟಾಸ್ಕ್ನಲ್ಲಿ 29 ಸ್ಟಾರ್ಸ್ಗಳನ್ನು ಪಡೆದುಕೊಂಡಿದ್ದ ಭವ್ಯಾ ಗೌಡ ಟೀಮ್ ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆಯಾಗಿತ್ತು. ಹೀಗಾಗಿ ಅದೇ ತಂಡದ 5 ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಕೊಟ್ಟಿದ್ದರು ಬಿಗ್ಬಾಸ್. ಐದು ಸ್ಪರ್ಧಿಗಳು ಸಾಲಾಗಿ ನಿಂತುಕೊಂಡಿರಬೇಕು. ಆಗ ಬಿಗ್ಬಾಸ್ ಹೇಳುವ ನಂಬರ್ನಲ್ಲಿರೋ ಚೆಂಡುಗಳನ್ನು ಓಡಿಹೋಗಿ ಹಿಡಿದು ಬಾಸ್ಕೆಟ್ನಲ್ಲಿ ಹಾಕಬೇಕು. ಇದೇ ಟಾಸ್ಕ್ನಲ್ಲಿ ಬಿಗ್ಬಾಸ್ ಮೊದಲು 9 ನಂಬರಿನ ಗೊಂಚಲಿನಿಂದ ಚಂಡುಗಳನ್ನು ತೆಗೆದುಕೊಂಡು ಹೋಗಲು ಹೇಳುತ್ತಾರೆ. ಆಗ ಎಲ್ಲರೂ ಓಡಿ ಹೋಗಿ ಆ ಚೆಂಡನ್ನು ಹಿಡಿಯುತ್ತಾರೆ. ಆಗ ಇದೇ ವೇಲೆ 3ನೇ ಗೊಂಚಲಿನಿಂದ ಚಂಡೊಂದು ಬೀಳುತ್ತದೆ.
ಆದರೆ ಅದನ್ನೂ ಇಬ್ಬರು ಉಸ್ತುವಾರಿಗಳು ಗಮನಕ್ಕೆ ಬರೋದಿಲ್ಲ. ಆ ಕೂಡಲೇ ಭವ್ಯಾ ಆ ಚೆಂಡನ್ನು ಎತ್ತಿಕೊಂಡು ಬುಟ್ಟಿಗೆ ಹಾಕುತ್ತಾರೆ. ಆಗ ಆ ಅದೇ ಬಾಲ್ ಬುಟ್ಟಿಗೆ ಬಿಳುತ್ತದೆ. ಇದರಿಂದ ಮೊದಲ ಹಂತದಲ್ಲಿ ಭವ್ಯಾ ಗೌಡ ಸೇಪ್ ಆಗುತ್ತಾರೆ. ಇದಾದ ಬಳಿಕ ಮತ್ತೆ ಇದೇ ಪ್ರಕ್ರಿಯೆಯಲ್ಲಿ ಚೆಂಡನ್ನು ಹಾಕಿ ಭವ್ಯಾ ಗೌಡ ಈ ವಾರದ ಕ್ಯಾಪ್ಟನ್ ಆಗುತ್ತಾರೆ. ಇನ್ನೂ, ಭವ್ಯಾ ಗೌಡ ಮೋಸದ ಆಟದ ಬಗ್ಗೆ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಪ್ರಸ್ತಾಪ ಮಾಡಿದ್ದಾರೆ. ಭವ್ಯಾ ಗೌಡ ಆಡಿದ ಮೋಸದ ಟಾಸ್ಕ್ ಬಗ್ಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜೊತೆಗೆ ವಿಡಿಯೋ ಕ್ಲಿಪ್ ಎಲ್ಲರ ಮುಂದೆ ತೋರಿಸಿ, ರಜತ್ ಅವರಿಗೆ ಗೊತ್ತಿದೆ ಅದು 9ನೇ ನಂಬರಿನಿಂದ ಬಿದ್ದಿದೆ ಅಂತ ಹೇಳಿದ್ದಾರೆ. ಆಗ ರಜತ್ ನಾನು ಹೇಳಿದೆ ಸರ್ ಆಗ ಭವ್ಯಾ ಸುಮ್ನೆ ಇರಿ ಅಂತ ಹೇಳಿದ್ರು ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ಕೇಳಿಸಿಕೊಂಡ ಮನೆ ಮಂದಿ ಶಾಕ್ ಆಗಿದ್ದಾರೆ.
ಮೋಸ ಬದಲಾಗುತ್ತಿದ್ದಂತೆ ಭವ್ಯಾಗೌಡ ಕಿಚ್ಚನ ಮುಂದೆ ಗಳಗಳನೆ ಕಣ್ಣೀರು ಹಾಕಿದ್ದಾರೆ.