ಬೆಂಗಳೂರು:- ಸಿಬಿಐ ಪೊಲೀಸರ ಹೆಸರಿನಲ್ಲಿ ಕರ್ನಾಟಕದ ವೃದ್ಧೆಗೆ ಮೋಸ ನಡೆದಿದೆ. ಮುಂಬೈ ಸೈಬರ್ ವಂಚಕರಿಂದ ವೃದ್ಧೆಗೆ ಕೋಟಿ ಪಂಗನಾಮ ಹಾಕಲಾಗಿದೆ.
ಹಾಲು ಉತ್ಪಾದಕರಿಗೆ ಸಿಕ್ಕಿಲ್ಲ 9 ತಿಂಗಳಿನಿಂದ ಪ್ರೋತ್ಸಾಹಧನ: ಪಶುಸಂಗೋಪನಾ ಸಚಿವರು ಹೇಳಿದ್ದೇನು?
ಮುಂಬೈ ಮೂಲದ ಸೈಬರ್ ವಂಚಕರು ಸಿಬಿಐ ಪೊಲೀಸರ ಹೆಸರಿನಲ್ಲಿ ಬೆಂಗಳೂರಿನ 83 ವರ್ಷದ ವೃದ್ದೆಗೆ 1 ಕೋಟಿಗೂ ಅಧಿಕ ಹಣ ವಂಚಿಸಿದ್ದಾರೆ.
ನಿಮ್ಮ ಮತ್ತೊಂದು ದೂರವಾಣಿ ಸಂಖ್ಯೆಯಿಂದ ಮನಿ ಲ್ಯಾಂಡರಿಂಗ್ ನಡೆಯುತ್ತಿದೆ. ನಿಮ್ಮ ವಿರುದ್ಧ ಮನಿ ಲ್ಯಾಂಡರಿಂಗ್ ಕೇಸ್ ದಾಖಲಾಗಿದೆ ಎಂದು ವೃದ್ಧೆಗೆ ಬೆದರಿಕೆ ಹಾಕಿದ್ದಾರೆ.
ಬಳಿಕ, ಆರೋಪಿಗಳು ವೃದ್ಧೆಯ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದಿದ್ದಾರೆ. ಆರೋಪಿಗಳ ಬೆದರಿಕೆಗೆ ಹೆದರಿದ ವೃದ್ಧೆ ಆರೋಪಿಗಳ ಖಾತೆ ಹಂತ ಹಂತವಾಗಿ 32 ಲಕ್ಷ ರೂ., 50 ರೂ. ಲಕ್ಷ, 32 ಲಕ್ಷ ರೂ., 10 ಲಕ್ಷ ರೂ. ಒಟ್ಟು 1.24 ಕೋಟಿ ರೂ. ಸೈಬರ್ ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ಹಣ ಖಾತೆಗೆ ಜೆಮೆಯಾದ ಬಳಿಕ ಆರೋಪಿಗಳು ಮತ್ತೆ ಸಂಪರ್ಕಿಸಿದ ಹಿನ್ನೆಲೆಯಲ್ಲಿ ವೃದ್ಧೆ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ, ವಂಚನೆಗೆ ಒಳಗಾಗಿರುವುದು ತಿಳಿದುಕೊಡಿದ್ದಾರೆ. ನಂತರ, ಘಟನೆ ನಡೆದು ಎರಡು ತಿಂಗಳ ಬಳಿಕ ವೃದ್ಧೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.