ತೆಲುಗು ಚಿತ್ರ ರಂಗದ ಖ್ಯಾತ ನಟ, ರಾಜಕಾರಣಿ ಮತ್ತು ನಿರ್ಮಾಪಕ ಬಂಡ್ಲ ಗಣೇಶ್ ಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 95 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಗೂಲ್ ನ್ಯಾಯಾಲಯವು ಶಿಕ್ಷೆಯ ಜೊತೆಗೆ 95 ಲಕ್ಷ ರೂಪಾಯಿ ಪಾವಂತಿಸುವಂತೆ ಸೂಚಿಸಿದೆ. ಒಂಗೂಲಿನ ನಿವಾಸಿ ಜೆಟ್ಟಿ ವೆಂಕಟೇಶ್ವರ ಎನ್ನುವವರ ಹತ್ತಿರ ಬಂಡ್ಲ ಗಣೇಶ್ ಹಣಕಾಸು ವ್ಯವಹಾರ ಮಾಡಿದ್ದರು. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ 95 ಲಕ್ಷ ರೂಪಾಯಿ ಮೊತ್ತದ ಚೆಕ್ ಕೂಡ ನೀಡಿದ್ದರು. ಆದರೆ ಗಣೇಶ್ ನೀಡಿರುವ ಚೆಕ್ ಬೌನ್ಸ್ ಆದ ಕಾರಣ ವೆಂಕಟೇಶ್ವರ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಅದೇ ಪ್ರಕರಣದಲ್ಲಿ ಬಂಡ್ಲ ಗಣೇಶ್ ಅವರಿಗೆ ಜೈಲು ಶಿಕ್ಷೆಯಾಗಿದೆ.
ಹಾಸ್ಯ ನಟರಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಬಂಡ್ಲ ಗಣೇಶ್ ನಟನೆಯ ಜೊತೆಗೆ ನಿರ್ಮಾಪಕರಾಗಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕರಾಗಿ ಭಾರೀ ಬಜೆಟ್ ಸಿನಿಮಾಗಳನ್ನೂ ಮಾಡಿದ್ದಾರೆ. ಇದೀಗ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಡ್ಲ ಗಣೇಶ್ ಒಂದು ವರ್ಷ ಜೈಲು ಸೇರುವಂತಾಗಿದೆ.