ಶಿವಮೊಗ್ಗ:- ಶಿವಮೊಗ್ಗದ ಸೆನ್ ಠಾಣೆ ಪೊಲೀಸರು ಭರ್ಜರಿ ಕಾರ್ಯಚರಣೆ ಮಾಡಿ, ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧರೊಬ್ಬರಿಗೆ 41 ಲಕ್ಷ ರೂ. ವಂಚನೆ ಮಾಡಿರುವಂತಹ ಘಟನೆ ಜರುಗಿದೆ.
Hubballi: ಬರೀ ಸುಳ್ಳು ಹೇಳಿ ಗುಜರಾತ್ ಮಾರ್ಕೆಟ್ ಮಾಡಿದ್ದಾರೆ- ಸಚಿವ ಸಂತೋಷ ಲಾಡ್!
ಮೊಹಮ್ಮದ್ ಅಹ್ಮದ್ ಮತ್ತು ಅಭಿಷೇಕ್ ಕುಮಾರ್ ಬಂಧಿತರು. ಸದ್ಯ ಬಂಧಿತ ಆರೋಪಿಗಳಿಂದ 23 ಲಕ್ಷದ 89 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.
ನಗರದ ಗೋಪಾಳ ಬಡಾವಣೆಯ ವೃದ್ಧ ಆನಂದ್ ಎಂಬುವವರು ವಂಚನೆಗೊಳಗಾದವರು. ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧ ಆನಂದ್ಗೆ ಕರೆ ಮಾಡಿದ್ದ ಖದೀಮರು, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡಮಟ್ಟದ ಹಣ ವರ್ಗಾವಣೆ ಆಗಿದೆ. ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದೇವೆ ಎಂದಿದ್ದಾರೆ. ನಿಮ್ಮನ್ನು ಅರೆಸ್ಟ್ ಮಾಡಲು ವಾರಂಟ್ ಜಾರಿಯಾಗಿದೆ. ಅರೆಸ್ಟ್ ಮಾಡಲು ಬರುತ್ತಿದ್ದೇವೆ ಎಂಬ ಬಗ್ಗೆ ಭಯ ಹುಟ್ಟಿಸಿದ್ದಾರೆ.
ನಿಮ್ಮನ್ನು ಬಂಧಿಸಬಾರದು ಅಂದರೆ ಹಣ ಕೊಡಿ ಎಂದು ಹೆದರಿಸಿದ್ದರು. ಆನಂದ್ ಖಾತೆಯಿಂದ 41 ಲಕ್ಷ ರೂ. ಹಣವನ್ನು ಖದೀಮರು ಹಾಕಿಸಿಕೊಂಡಿದ್ದಾರೆ. ಕೆಲ ದಿನಗಳ ಬಳಿಕ ಮೋಸ ಹೋಗಿರುವ ಬಗ್ಗೆ ಆನಂದ್ಗೆ ಅನುಮಾನ ಮೂಡಿದ್ದು, ಈ ಬಗ್ಗೆ ಶಿವಮೊಗ್ಗದ ಸೆನ್ ಠಾಣೆಗೆ ದೂರು ನೀಡಿದ್ದಾರೆ.