ಜಿಯೋ ರಿಚಾರ್ಜ್ ದುಬಾರಿ ಎಂದುಕೊಳ್ಳುತ್ತಿದ್ದವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಟ್ಯಾರಿಫ್ ಪ್ಲಾನ್ ಹೆಚ್ಚಾದ ಹಿನ್ನೆಲೆ ಬಳಕೆದಾರರು ಅತಿ ಕಡಿಮೆ ಬೆಲೆಯ ಉತ್ತಮ ಪ್ಲಾನ್ ಲಭ್ಯವಾಗಿದೆ. ಜಿಯೋ ತನ್ನ ಬಳಕೆದಾರರಿಗಾಗಿ ಪೋರ್ಟಫೋಲಿಯೋದಲ್ಲಿ 22 ದಿನಗಳಿಂದ 365 ದಿನದ ವ್ಯಾಲಿಡಿಟಿಯ ಪ್ಲಾನ್ಗಳನ್ನು ಸೇರ್ಪಡೆಗೊಳಿಸುತ್ತಿದೆ. ಇದರಲ್ಲಿ ಗ್ರಾಹಕರು ಪ್ರತಿದಿನ 1 ಜಿಬಿ ಡೇಟಾ ಜೊತೆಗೆ ಹಲವು ಆಫರ್ಗಳು ಸಿಗಲಿದೆ.
ಜಿಯೋ 22 ದಿನ ವ್ಯಾಲಿಡಿಟಿಯ ಕಡಿಮೆ ದರದ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ ಬೆಲೆ 209 ರೂಪಾಯಿ ಆಗಿದೆ. ಇದು ಜಿಯೋ ನೀಡುತ್ತಿರುವ ಕಡಿಮೆ ದರದ ಪ್ಲಾನ್ ಆಗಿದೆ. 209 ರೂಪಾಯಿ ರೀಚಾರ್ಜ್ ಮಾಡಿಸಿದ್ರೆ 22 ದಿನಗಳವರೆಗೆ ಪ್ರತಿದಿನ 1 ಜಿಬಿ ಡೇಟಾ, 100 ಎಸ್ಎಂಎಸ್ ಸಿಗಲಿವೆ. ಇದರ ಜೊತೆಗೆ ಅನಿಯಮಿತ ಕಾಲಿಂಗ್ ಸೌಲಭ್ಯ ಸಿಗಲಿದೆ.
ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ ನಂತರ ಬಳಕೆದಾರರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ನ ಫ್ರೀ ಸಬ್ಸ್ಕ್ರಿಪ್ಷನ್ ಸಿಗುತ್ತದೆ. ಜಿಯೋ ಸಿನಿಮಾದಲ್ಲಿ 10 ಸಾವಿರಕ್ಕೂ ಅಧಿಕ ಸಿನಿಮಾಗಳಿದ್ದು, ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ ಹಾಗೂ ಕ್ರೀಡೆಗಳ ಲೈವ್ ಪಂದ್ಯ ವೀಕ್ಷಿಸಬಹುದಾಗಿದೆ. ಈ ಮೊದಲು ಪ್ಲಾನ್ ವ್ಯಾಲಿಡಿಟಿ 28 ದಿನ ಇತ್ತು. ಬೆಲೆ 249 ರೂಪಾಯಿ ಆಗಿತ್ತು. ಇದೀಗ ಬೆಲೆ ಮತ್ತು ವ್ಯಾಲಿಡಿಟಿ ಎರಡೂ ಇಳಿಕೆಯಾಗಿದೆ.