ಬೆಂಗಳೂರು:- ಉಪಚುನಾವಣೆ ಹಿನ್ನೆಲೆ, ಚನ್ನಪಟ್ಟಣ ಟಿಕೆಟ್ ಕಗ್ಗಂಟು ದಿನೇ ದಿನೇ ಜೋರಾಗುತ್ತಿದೆ. ಒಂದೆಡೆ ಕುಮಾರಸ್ವಾಮಿ ಆಫರ್ ಗೆ ಒಪ್ಪದ ಸಿಪಿ ಯೋಗೇಶ್ವರ್ ಸ್ವತಂತ್ರ ಸ್ಪರ್ಧಿಯಾಗಿ ನಿಲ್ಲುತ್ತಾರೆ ಎಂಬ ಮಾತುಗಳು ಕೇಳಿ ಬರ್ತಿದೆ.
ಫಿಶ್ ಟನಲ್ ಎಕ್ಪೋದಲ್ಲಿ ಅವಘಡ: ರೇಂಜರ್ ಸ್ವಿಂಗ್ನಿಂದ ಬಿದ್ದು ಯುವತಿ ದುರ್ಮರಣ!
ಆದರೆ ಇದರ ಮಧ್ಯೆ ಕಾಂಗ್ರೆಸ್ ನಾಯಕರು, ಸಿಪಿ ಯೋಗೇಶ್ವರ್ ಗೆ ಟಿಕೆಟ್ ನೀಡುವ ಆಫರ್ ಕೊಟ್ಟಿದ್ದಾರೆ. ಹೀಗಾಗಿ ಯೋಗೇಶ್ವರ್ ನಿರ್ಧಾರದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ.
ಜೆಡಿಎಸ್ ನ ಸಿಂಬಲ್ ನಲ್ಲಿ ಸ್ಪರ್ಧೆ ಮಾಡುವುದಕ್ಕೆ ಸಿಪಿ ಯೋಗೀಶ್ವರ್ ಸಿದ್ಧರಿಲ್ಲ. ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟು ಕೊಡೋದಕ್ಕೆ ಎಚ್ ಡಿ ಕುಮಾರಸ್ವಾಮಿ ರೆಡಿ ಇಲ್ಲ. ಹೀಗಾಗಿ ಅತ್ತ ಜೆಡಿಎಸ್ ಸಭೆಯ ನಡುವೆಯೂ ಸಿಪಿ ಯೋಗೇಶ್ವರ್ ಬಿಜೆಪಿ ನಾಯಕರ ಮೆಸೇಜಿಗೆ ಕಾದು ಕುಳಿತಿದ್ದರು. ಯೋಗೇಶ್ವರ್ ನಡೆ ಹೀಗೆ ನಿಗೂಢವಾಗಿದ್ದರೆ. ಯೋಗೀಶ್ವರ್ ಕಡೆ ಮುಖಮಾಡಿ ನಿಂತದ್ದು ಮತ್ತೊಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್.
ಯೋಗೀಶ್ವರನ ಬರಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ರೆಡ್ ಕಾರ್ಪೆಟ್ ಹಾಕಿ ಬಾಗಿಲು ತೆರೆದು ನಿಂತಿದೆ. ಯೋಗೀಶ್ವರ್ ಪಕ್ಷಕ್ಕೆ ಬರಬಹುದು ಎಂಬ ಕಾರಣಕ್ಕೆ ನಿನ್ನೆ ತಡರಾತ್ರಿವರೆಗೂ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಆಪ್ತ ಶಾಸಕರ ಜೊತೆಗೆ ಮೀಟಿಂಗ್ ಮಾಡಿದ್ದಾರೆ. ಇಂದು ಬೆಳಗ್ಗೆಯ ಹೊತ್ತಿಗೆ ಸಿಪಿ ಯೋಗೀಶ್ವರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಗ್ರೀನ್ ಸಿಗ್ನಲ್ ನೀಡಬಹುದು ಎಂದು ಕಾಂಗ್ರೆಸ್ ಕೂಡ ಕಾದಿತ್ತು. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆಗಳು ಹೈಕಮಾಂಡ್ ಮಟ್ಟದಲ್ಲೂ ನಡೆದಿದ್ದು ಸಿಎಂ ಕೂಡ ಯೋಗೇಶ್ ಅವರಿಗೆ ಸ್ವಾಗತ ಕೋರಿದ್ದಾರೆ. ಆದ್ರೆ ಯಾವಾಗ ಮಧ್ಯಾಹ್ನದ ವೇಳೆಗೂ ಯೋಗೇಶ್ವರ್ ಕಾಂಗ್ರೆಸ್ ಸೇರುವ ಬಗ್ಗೆ ಮೆಸೇಜ್ ಬರಲಿಲ್ಲವೋ ಆಗ ಕಾಂಗ್ರೆಸ್ ತನ್ನ ಪ್ಲಾನ್ ಬಿ ಅನ್ನ ಯೋಚನೆ ಮಾಡಿದೆ.
ಯೋಗೀಶ್ವರನ ಸೇರಿಸಿಕೊಳ್ಳಲು ಕಾಂಗ್ರೆಸ್ ತುದಿಗಳಲ್ಲಿ ನಿಂತಿರೋದು ಸತ್ಯ ಎಚ್ಡಿ ಕುಮಾರಸ್ವಾಮಿಯನ್ನು ಬಗ್ಗು ಬಡಿಯಬೇಕು ಅಂದ್ರೆ ಅದಕ್ಕೆ ಯೋಗೀಶ್ವರ್ ಮತ್ತು ಕಾಂಗ್ರೆಸ್ ಪಕ್ಷದ ಕಾಂಬಿನೇಷನ್ ಸೂಕ್ತ ಎಂಬ ಲೆಕ್ಕಾಚಾರ ಡಿಕೆ ಸಹೋದರರದ್ದು. ಆದರೆ ಯೋಗೀಶ್ವರ್ ಜೆಡಿಎಸ್ ಬಿಜೆಪಿ ಒಕ್ಕೂಟದ ಅಭ್ಯರ್ಥಿಯಾದರೆ ಆಗ ಕಾಂಗ್ರೆಸ್ ಪ್ಲಾನ್ ಬದಲಾಗಲಿದೆ. ಒಂದು ಕಡೆ ಡಿಕೆ ಸುರೇಶ್ ಕೂಡ ಚುನಾವಣೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ರೆ ಮತ್ತೊಬ್ಬ ಅಭ್ಯರ್ಥಿ ರಘುನಂದನ್ ರಾಮಣ್ಣ ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ, ಡಿಕೆ ಬ್ರದರ್ಸ್ ಸೂಚಿಸಿದ್ದಾರೆ.
ಅಕಸ್ಮಾತ್ ಯೋಗೀಶ್ವರ್ ಪಕ್ಷೇತರವಾಗಿ ನಿಂತು ಜೆಡಿಎಸ್ ಕೂಡ ತನ್ನ ಕ್ಯಾಂಡಿಡೇಟ್ ಇಳಿಸಿದರೆ ಆಗ ಡಿಕೆ ಸುರೇಶ್ ಸ್ವಲ್ಪ ಮಟ್ಟಿಗೆ ರಿಸ್ಕ್ ಎದುರಿಸಬಹುದು ಅಥವಾ ಇದು ಯಾವ ಗೊಂದಲವು ಬೇಡವೇ ಬೇಡ ಎಂದು ರಘುನಂದನ್ ರಾಮಣ್ಣ ಅವರನ್ನು ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ.
ಇಲ್ಲಿ ಮತ್ತೊಂದು ವಿಷಯ ಅತ್ಯಂತ ಗಮನಹರವಾದ್ದು ಪ್ರತಿ ಬಾರಿಯೂ ಕಾಂಗ್ರೆಸ್ ನೇರ ನೇರವಾಗಿ ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತಿತ್ತು. ಆದರೆ, ಸದ್ಯ ಜೆಡಿಎಸ್ ಬಿಜೆಪಿ ಮೈತ್ರಿ ನಾಯಕರ ನಡೆ ನೋಡಿಕೊಂಡು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಡಿಸೈಡ್ ಮಾಡಲಿದೆ. ಕಾಂಗ್ರೆಸ್ ಕಡೆ ಸಿಪಿ ಯೋಗೀಶ್ವರ್ ಬಂದರೆ ಯೋಗೇಶ್ವರ್ ಅಭ್ಯರ್ಥಿ ಆಗ್ತಾರೆ. ಇಲ್ಲದೆ ಹೋದರೆ ಕಾಂಗ್ರೆಸ್ ನ ಸ್ಟ್ರಾಟಜೀ ಸಂಪೂರ್ಣವಾಗಿ ಬದಲಾಗಲಿದೆ.