ಬೆಂಗಳೂರು: ಮುಸ್ಲಿಂರಿಗೆ ಮತದಾನದ ಹಕ್ಕು ನೀಡಬಾರದು ಎಂದು ಚಂದ್ರಶೇಖರ್ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಚಾರ ಸಂಬಂಧ ಉಪ್ಪಾರಪೇಟೆ ಪೊಲೀಸರು ಚಂದ್ರಶೇಖರ ಸ್ವಾಮೀಜಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಈ ಕುರಿತು ಚಂದ್ರಶೇಖರ್ ಸ್ವಾಮೀಜಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೆಂಗಲ್ ಚಂಡಮಾರುತದ ಎಫೆಕ್ಟ್: ಮಳೆಗೆ ಮನೆ ಗೋಡೆ ಕುಸಿತ, ಇಬ್ಬರು ಪ್ರಾಣಾಪಾಯದಿಂದ ಪಾರು
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನನಗೆ ನೊಟೀಸ್ ಕೊಟ್ಟಿದ್ದಾರೆ. ಕ್ಷಮೆ ಕೇಳಿದ ಮೇಲೆ ಕೂಡ ಕೇಸ್ ಮಾಡಿದ್ದಾರೆ. ನನಗೆ ಹುಷಾರಿಲ್ಲ. ನಡೆಯೋಕೆ ಆಗಲ್ಲ. ಎಲ್ಲಿಗೂ ತಿರುಗಾಡೋಕೆ ಆಗಲ್ಲ. ಹೀಗಾಗಿ ನನಗೆ ಹೋಗೋದಕ್ಕೆ ಆಗೋದಿಲ್ಲ. ಮಠದವರೆಗೂ ಬಂದು ಪೊಲೀಸರು ನೊಟೀಸ್ ನೀಡಿದರು. ಈ ತರ ಹುಷಾರಿಲ್ಲ ಅಂತಾ ಹೇಳಿದೀನಿ. ಇಲ್ಲಿಗೆ ಬಂದ್ರೆ ಹೇಳಿಕೆ ಕೊಡ್ತೀನಿ. ಎಂತೆಂಥಾ ವಿಷ್ಯಗಳಲ್ಲಿ ಏನೂ ಮಾಡಲ್ಲ.. ನಮ್ಮ ವಿಚಾರದಲ್ಲಿ ಕೇಸ್ ಮಾಡ್ತಾರೆ. ಬೇರೆ ಬೇರೆಯವರ ಮೇಲೆ ಏನೂ ಕ್ರಮ ಕೈಗೊಳ್ಳಲ್ಲ. ಹೆಚ್ಡಿಕೆಗೆ ಕರಿಯ ಅಂದೋರ ಮೇಲೆ ಕ್ರಮ ಇಲ್ಲ. ವಿಧಾನಸೌದದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಅಂದ್ರು, ಅವ್ರನ್ನ ಏನೂ ಮಾಡಿಲ್ಲ. ನಾನು ಕ್ಷಮೆ ಕೇಳಿದ್ರೂ ಕೂಡ ಈ ರೀತಿ ಕೇಸ್ ಮಾಡಿದ್ದಾರೆ. ಈ ವಯಸ್ಸಲ್ಲಿ ನನಗೆ ಕೇಸ್ ಅಂತಿದ್ದಾರೆ, ಆಗಲಿ.. ಅವರು ಬಂದು ಕೇಳಿದ್ರೆ ಉತ್ತರ ಕೊಡ್ತೀನಿ ಎಂದರು.