ಈ ಹಾಡು ಹದಿಹರೆಯದ ಹುಡುಗರಿಗೆ ಹೇಳಿ ಮಾಡಿಸಿದ ಹಾಡು. ಹುಡುಗರ ಪ್ರಾಬ್ಲಮ್ ಗಳನ್ನು ಬಿಂಬಿಸುವ ಹಾಡಿದು. ‘ಪ್ರಾಬ್ಲಮ್ ಪ್ರಾಬ್ಲಮ್ ಪ್ರಾಬ್ಲಮ್ ವಾಟ್ ಟು ಡು ಮಾಮ?’ ಎಂದೇ ಹಾಡು ಆರಂಭವಾಗುತ್ತದೆ. ಇಷ್ಟು ದಿನ ಬಿಡುಗಡೆಯಾಗಿರುವ ಚಂದನ್ ಶೆಟ್ಟಿ ಅವರ RAP ಸಾಂಗ್ಸ್ ಹೆಚ್ಚಾಗಿ ಪಬ್ ಗಳ ಮೇಲೆ ಕೇಂದ್ರಿಕೃತವಾಗಿತ್ತು. ಆದರೆ ಈ ಹಾಡು ಪಕ್ಕಾ ಲೋಕಲ್ ಸ್ಟೈಲ್ ನಲ್ಲಿ ಮೂಡಿಬಂದಿದೆ. ಕಂಠೀರವ ಸ್ಟುಡಿಯೋದಲ್ಲಿ ಬಾರ್ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಚಂದನ್ ಶೆಟ್ಟಿ ಈ ಹಾಡಿನಲ್ಲಿ ಪಕ್ಕಾ ಲೋಕಲ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟ ರಂಗಾಯಣ ರಘು ಅವರು ಚಂದನ್ ಶೆಟ್ಟಿ ಅವರ ಸೋದರಮಾವನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿಯ ಕಲಾವಿದರಾದ ರಾಘವೇಂದ್ರ, ಆರ್ ಜೆ ವಿಕ್ಕಿ, ಹುಲಿ ಕಾರ್ತಿಕ್, ನಿತಿನ್ ಅಮಿನ್, ಶಿಡ್ ಶ್ಯಾಡೋ ಶಿವ, ಎನ್ ಸಿ ಅಯ್ಯಪ್ಪ ಮುಂತಾದವರು ಈ ಅದ್ದೂರಿ RAP ಸಾಂಗ್ ನಲ್ಲಿ ನಟಿಸಿದ್ದಾರೆ.
ಇಷ್ಟು ದಿನ ಚಂದನ್ ಶೆಟ್ಟಿ ಅವರ ಸುಪ್ರಸಿದ್ದ RAP ಸಾಂಗ್ಸ್ ಗಳನ್ನು ಬೇರೆಬೇರೆ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಚಂದನ್ ಶೆಟ್ಟಿ ಅವರೆ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ವಿಜಯ್ ಈಶ್ವರ್ ಅವರ ಜೊತೆಗೂಡಿ ಹಾಡನ್ನು ಬರೆದಿದ್ದಾರೆ. ರಿಯಾಲಿಟಿ ಶೋ ನಲ್ಲಿ ಜನಪ್ರಿಯರಾಗಿರುವ ಮುರುಗ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಉದಯಲೀಲ ಛಾಯಾಗ್ರಹಣ, ಸತೀಶ್ ಚಂದ್ರ ಸಂಕಲನ ಹಾಗೂ ದಿವಾಕರ್ ಅವರ ಕಲಾ ನಿರ್ದೇಶನ ಈ ಹಾಡಿಗಿದೆ.