ಬಿಗ್ ಬಾಸ್ ಮೂಲಕ ಪರಿಚಯವಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಹೊರ ಬಂದ ಬಳಿಕ ಮದುವೆಯಾದರು. ಆದರೆ ಚಂದನ್ ಹಾಗೂ ನಿವೇದಿತಾ ಮದುವೆ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾ ಕೆಲ ವರ್ಷಕ್ಕೆ ಡಿವೋರ್ಸ್ ಪಡೆದು ದೂರ ದೂರವಾಗಿದ್ದಾರೆ. ಆದರೆ ಡಿವೋರ್ಸ್ ಗೆ ಕಾರಣ ಏನು ಎಂಬುದು ಮಾತ್ರ ರಿವೀಲ್ ಆಗಿಲ್ಲ. ಚಂದನ್ ಹಾಗೂ ನಿವೇದಿತಾ ಡಿವೋರ್ಸ್ ಗೆ ಸಲಗ ಸಿನಿಮಾದ ನಾಯಕಿ ಸಂಜನಾ ಆನಂದ್ ಕಾರಣ ಎಂದು ಹೇಳಲಾಗಿತ್ತು. ಈ ವೇಳೆ ಸಂಜನಾ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಂಜನಾ, ನನಗೆ ಮತ್ತು ಚಂದನ್ ಶೆಟ್ಟಿ ಅವರಿಗೆ ಮದುವೆ ಫಿಕ್ಸ್ ಆಗಿದೆ ಎಂದೆಲ್ಲ ಸುಳ್ಳು ಸುದ್ದಿಯನ್ನು ಹಬ್ಬಿಸಿದರು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಡಿವೋರ್ಸ್ಗೆ ನಾನೇ ಕಾರಣವೆಂದರು. ಇನ್ನೂ ಕೆಲವರು ಎಐ ತಂತ್ರಜ್ಞಾನದ ಮೂಲಕ ನಮ್ಮಿಬ್ಬರಿಗೆ ಮದುವೆಯ ಫೋಟೊಗಳನ್ನು ವೈರಲ್ ಮಾಡಿದ್ದರು. ಮಂಗಳೂರಿನಲ್ಲಿ ನಮ್ಮಿಬ್ಬರ ಮದುವೆ ನಡೆಯಲಿದೆ ಎಂದು ಕೂಡ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಬಗ್ಗೆ ಹೀಗೆ ಇಲ್ಲ ಸಲ್ಲದ ಸುದ್ದಿಗಳು ಬಂದಾಗ ನಾನು ತಲೆ ಕೆಡಿಸಿಕೊಂಡಿರಲಿಲ್ಲ ಆದರೆ ಅದ್ಯಾವಾಗ ಸಂಬಂಧಿಕರೆಲ್ಲ ನನಗೆ ಕರೆ ಮಾಡಲು ಶುರು ಮಾಡಿ ಚಂದನ್ ಶೆಟ್ಟಿ ಜೊತೆ ಮದುವೆಯಾಗ್ತಿದೀಯಾ ಅಂತೆ ನಮಗೆಲ್ಲ ಕರಿಲೇ ಇಲ್ಲ ಎಂದು ಕೇಳತೊಡಗಿದಾಗ ನನಗೆ ಚೂರು ಗಾಭರಿಯಾಯಿತು. ಸುಮ್ಮನೆ ಇದ್ದರೆ ಇದೆಲ್ಲ ಇನ್ನೂ ಹೆಚ್ಚಾಗುತ್ತೆ ಎಂದು ನಾನು ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟೀಕರಣವನ್ನು ನೀಡಿದೆ ಎಂದಿದ್ದಾರೆ.