ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ನಾಳೆಯಿಂದ ನಾಲ್ಕು ದಿನ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಿಕ್ಕಬಳ್ಳಾಪುರ: ರಕ್ಷಾರಾಮಯ್ಯ ಸ್ಥಳೀಯರಲ್ಲ – ಸುಧಾಕರ್ ಹೇಳಿಕೆಗೆ ಟಾಂಗ್ ಕೊಟ್ಟ “ಕೈ” ಅಭ್ಯರ್ಥಿ!
ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ, ಉಡುಪಿ, ಹಾವೇರಿ, ಬೆಳಗಾವಿ, ಚಿತ್ರದುರ್ಗ, ಚಾಮರಾಜನಗರ, ತುಮಕೂರುಗಳಲ್ಲಿ ಮಳೆಯಾಗಲಿದೆ ಎಂದು ತಿಳಿದುಬಂದಿದೆ..
ಇನ್ನು ಬೆಂಗಳೂರು ಸೇರಿದಂತೆ ರಾಜ್ಯದ ಜನ ಬಿಸಿಲ ಧಗೆಗೆ ತತ್ತರಿಸಿದ್ದಾರೆ… ಬೆಂಗಳೂರಿನಲ್ಲಿ ತಾಪಮಾನ 35 ಡಿಗ್ರಿ ಮೀರಿದೆ.. ಉತ್ತರ ಕರ್ನಾಟಕ ಭಾಗದಲ್ಲಿ ಅದು 40 ಡಿಗ್ರಿವರೆಗೂ ಮುಟ್ಟಿದೆ.. ಈ ಹಿನ್ನೆಲೆಯಲ್ಲಿ ಈಗ ಮಳೆ ಬಂದರೆ ಜನರಿಗೆ ಕೊಂಚ ನೆಮ್ಮದಿ ಸಿಗಲಿದೆ.. ಇನ್ನು ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ… ಹೀಗಾಗಿ ಕೊಂಚ ಮಳೆ ಸುರಿದರೆ ಇರಿಂದ ನೀರಿನ ಸಮಸ್ಯೆಯೂ ಕೊಂಚ ನೀಗಲಿದೆ..