ಬೆಂಗಳೂರು:- ಚಾಮುಂಡೇಶ್ವರಿ ಹರಕೆ ಸೀರೆ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂಕೆ “ಮುಡಾ” ದೂರುದಾರ ಸ್ನೇಹಮಹಿ ಕೃಷ್ಣ ವಿರುದ್ಧ FIR ದಾಖಲಾಗಿದೆ.
ಬಿಜೆಪಿಗೆ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡುವ ಬಗ್ಗೆ ಆಸಕ್ತಿ ಇಲ್ಲ: ಡಿಕೆಶಿ ವಾಗ್ದಾಳಿ!
ಕೃಷ್ಣರಾಜ ಪೊಲೀಸ್ ಠಾಣೆಗೆ ಚಾಮುಂಡೇಶ್ವರಿ ದೇವಾಲಯದ ಕಾರ್ಯದರ್ಶಿ ರೂಪಾ ದೂರು ನೀಡಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪ ಹೊರಿಸಿ ರೂಪಾ ಅವರು ದೂರು ನೀಡಿದ್ದರು. ದೂರಿನ ಹಿನ್ನೆಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಚಾಮುಂಡೇಶ್ವರಿ ದೇವಿಯ ಹರಕೆ ಸೀರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸ್ನೇಹಮಯಿ ಕೃಷ್ಣ ದೂರಿದ್ದರು. ಈ ಸಂಬಂಧ ವೀಡಿಯೋ ಕೂಡ ಹರಿಬಿಟ್ಟಿದ್ದರು. ವ್ಯಕ್ತಿಯೊಬ್ಬರು ಬೆಟ್ಟದಲ್ಲಿ ಗಂಟೊಂದರಲ್ಲಿ ಸೀರೆಗಳನ್ನು ತುಂಬಿಕೊಂಡು ಸಾಗಿಸಿದ್ದಾರೆಂದು ಆರೋಪಿಸಲಾಗಿತ್ತು.
ಈ ಆರೋಪವನ್ನು ರೂಪ ಅಲ್ಲಗಳೆದು ಪ್ರಕರಣ ದಾಖಲಿಸಿದ್ದಾರೆ.