ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ಗಳ ಜಯ ಸಾಧಿಸಿದೆ. ಗಿಲ್ ಶತಕದಾಟ, ಶಮಿ ಬೆಂಕಿ ಬೌಲಿಂಗ್ ನೆರವಿನಿಂದ ಈ ಗೆಲುವು ಸಾಧಿಸಿದೆ.
ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಪುಂಡಾಟ ಪ್ರಕರಣ: ಆರೋಪಿಗಳು ಅರೆಸ್ಟ್!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 49.4 ಓವರ್ಗಳಿಗೆ ಆಲೌಟ್ ಆಗಿ 228 ರನ್ ಗಳಿಸಿತು. 229 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ 46.3 ಓವರ್ಗಳಿಗೆ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆಲುವು ದಾಖಲಿಸಿದೆ.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ, ಶುಭಮನ್ ಗಿಲ್ ಜೋಡಿ ಉತ್ತಮ ಪ್ರದರ್ಶನ ನೀಡಿತು. ಶರ್ಮಾ 41 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ 22, ಶ್ರೇಯಸ್ ಅಯ್ಯರ್ 15 ರನ್ ಗಳಿಸಿದರು. ಗಿಲ್ ಶತಕ ಸಿಡಿಸಿ (101 ರನ್, 9 ಫೋರ್, 2 ಸಿಕ್ಸರ್) ತಂಡವನ್ನು ಗೆಲುವಿನ ದಡ ಸೇರಿಸಿದರು. ಗಿಲ್ಗೆ ಕೆ.ಎಲ್.ರಾಹುಲ್ ಸಾಥ್ ನೀಡಿ 41 ರನ್ ಕಲೆ ಹಾಕಿದರು.
ಬಾಂಗ್ಲಾ ಪರ ಜಾಕರ್ ಅಲಿ ಅರ್ಧಶತಕ (68), ತಾಂಜಿದ್ ಹಸನ್ 25, ರಿಷದ್ ಹೊಸೇನ್ 18 ರನ್ ಗಳಿಸಿದರು. ತಂಡದ ಕ್ಯಾಪ್ಟನ್ ನಜ್ಮುಲ್ ಹೊಸೇನ್ ಶಾಂತೊ ಸೇರಿದಂತೆ ಪ್ರಮುಖ ಆಟಗಾರರೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಭಾರತದ ಬೌಲರ್ಗಳು ಬಾಂಗ್ಲಾ ಬ್ಯಾಟರ್ಗಳ ಬೆವರಿಳಿಸಿದರು. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 5 ವಿಕೆಟ್ ಕಿತ್ತು ಮಿಂಚಿದರು.