ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ನಡೆಯುತ್ತಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡವು ಮುಖಾಮುಖಿಯಾಗಿದೆ.
Rohit Sharma: ಸತತ ಟಾಸ್ ಸೋಲು: ವಿಶ್ವ ದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್!
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇತ್ತ ಟೀಮ್ ಇಂಡಿಯಾ ಪರ ಆಡುವ ಬಳಗದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಕಿಂಗ್ ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ ಕೂಡ ಸೇರ್ಪಡೆಯಾಗಿದೆ.
ಇದು ವಿರಾಟ್ ಕೊಹ್ಲಿ 550ನೇ ಅಂತಾರಾಷ್ಟ್ರೀಯ ಮ್ಯಾಚ್. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 550 ಪಂದ್ಯಗಳನ್ನಾಡಿರುವುದು ಕೇವಲ 6 ಆಟಗಾರರು ಮಾತ್ರ. ಈ ಸಾಧನೆ ಮಾಡಿದ ಆರನೇ ಆಟಗಾರ ವಿರಾಟ್ ಕೊಹ್ಲಿ. ಅಲ್ಲದೆ ಈ ಮೈಲುಗಲ್ಲು ಮುಟ್ಟಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೂ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 550+ ಪಂದ್ಯಗಳನ್ನಾಡಿದ ಆಟಗಾರರೆಂದರೆ ಸಚಿನ್ ತೆಂಡೂಲ್ಕರ್ (ಭಾರತ), ಮಹೇಲ ಜಯವರ್ಧನೆ (ಶ್ರೀಲಂಕಾ), ಕುಮಾರ ಸಂಗಾಕ್ಕರ (ಶ್ರೀಲಂಕಾ), ಸನತ್ ಜಯಸೂರ್ಯ (ಶ್ರೀಲಂಕಾ) ಹಾಗೂ ರಿಕಿ ಪಾಟಿಂಗ್ (ಆಸ್ಟ್ರೇಲಿಯಾ). ಇದೀಗ ಈ ಸಾಧಕರ ಪಟ್ಟಿಗೆ ವಿರಾಟ್ ಕೊಹ್ಲಿ ಎಂಟ್ರಿ ಕೊಟ್ಟಿದ್ದಾರೆ.
ಟೀಮ್ ಇಂಡಿಯಾ ಪರ ಈವರೆಗೆ 550* ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಒಟ್ಟು 27598* ರನ್ ಕಲೆಹಾಕಿದ್ದಾರೆ. ಈ ವೇಳೆ ಕಿಂಗ್ ಕೊಹ್ಲಿ ಬ್ಯಾಟ್ನಿಂದ 82 ಶತಕಗಳು ಮೂಡಿಬಂದಿವೆ