ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನ್ಯೂಜಿಲೆಂಡ್ ತಂಡದ ವಿರುದ್ಧ ಅಜೇಯ ಭಾರತ ತಂಡವು ಸೆಣಸಾಡಲಿದೆ. ಐಸಿಸಿ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗ್ತಿವೆ. ಹೀಗಾಗಿ ಚಂದನವನದ ತಾರೆಯರು ಟೀಮ್ ಇಂಡಿಯಾದ ಗೆಲುವಿಗಾಗಿ ಶುಭಹಾರೈಸಿದ್ದಾರೆ.
ಧ್ರುವ ಸರ್ಜಾ ವಿಶ್ ಮಾಡಿದ್ದು, ಭಾರತ ಮಾತೆ ಗೆದ್ದೆ ಗೆಲ್ಲುತ್ತಾರೆ. ನಮ್ಮ ಟೀಮ್ ಇಂಡಿಯಾ ಗೆದ್ದೆ ಗೆಲ್ಲುತ್ತದೆ. ಮುಂಚೆ ಕ್ರಿಕೆಟ್ ಆಡುತ್ತಿದ್ದೆ,ಈಗ ಬರೀ ನೋಡುತ್ತೇನೆ. ನಮ್ಮ ಭಾರತನೇ ಗೆಲ್ಲಲಿ ಆಲಿ ದಿ ಬೆಸ್ಟ್, ಜೈ ಆಂಜನೇಯ ಎಂದಿದ್ದಾರೆ.
ಅದೇ ರೀತಿ ಚಂದನ್ ಶೆಟ್ಟಿ ಮಾತನಾಡಿ, ಇಂಡಿಯಾ ವಿನ್ ಆಗೇ ಆಗುತ್ತಾರೆ. ನ್ಯೂಜಿಲೆಂಡ್ ಟೀಮ್ ಏನು ಕಮ್ಮಿಯಿಲ್ಲ. ಅವರು ಕೂಡ ಸ್ಟ್ರಾಂಗ್ ಇದ್ದಾರೆ. ಅವರ ಫೀಲ್ಡಿಂಗ್ ನೋಡಿದ್ರೆನೇ ಭಯ ಆಗುತ್ತದೆ. ಈ ಸಲ ಇಂಡಿಯಾ ಗೆಲ್ಲಬೇಕು ಅಂದರೆ, ಪ್ರತಿ ಬಾಲ್ 6 ರನ್ ಹೊಡೆಯಲೇಬೇಕು. 4 ರನ್ ಹೊಡೆದರೆ ಎದುರಾಳಿ ತಂಡ ಪಕ್ಕಾ ಹಿಡಿಯುತ್ತಾರೆ. ಹಾಗಾಗಿ ನಮ್ಮ ಟೀಮ್ ಇಂಡಿಯಾ ತಂಡ, ಪ್ರತಿ ಬಾಲ್ 6 ರನ್ ಹೊಡೆಯಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ನಮ್ಮ ಭಾರತನೇ ಗೆಲ್ಲಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ನಟ ಕಿಶೋರ್ ವಿಶ್ ಮಾಡಿದ್ದು, ಆಲ್ ದಿ ಬೆಸ್ಟ್ ಟೀಮ್ ಇಂಡಿಯಾ. ಅವತ್ತಿನ ದಿನ ಯಾರು ಬೆಸ್ಟ್ ಇರುತ್ತಾರೋ ಅವರಿಗೆ ಗೆಲುವು ಸಿಗುತ್ತದೆ. ಗೆಲುವು ಮುಖ್ಯವಲ್ಲ, ಕ್ರೀಡಾ ಮನೋಭಾವ ಮುಖ್ಯ. ಆಟ ಆಡೋದು ಮುಖ್ಯ, ಚೆನ್ನಾಗಿ ಆಡೋದು ಮುಖ್ಯ. ಗೆಲುವು ಸೋಲು ಎಲ್ಲಾ ಇದ್ದಿದ್ದೇ. ಒಂದು ವೇಳೆ, ಮ್ಯಾಚ್ ಸೋತ್ರೆ ಟ್ರೋಲ್ ಮಾಡಬೇಡಿ ನಮ್ಮ ಆಟಗಾರರಿಗೆ. ಆಟ ಕೂಡ ಕಲೆ ತರನೇ ಜನರನ್ನು, ದೇಶವನ್ನು ಬೆಸೆಯಬೇಕು ಎಂದರು.
ನಟಿ ಅಂಕಿತಾ ಅಮರ್ ಮಾತನಾಡಿ,ಇಂಡಿಯಾ ಹಾಗೂ ನ್ಯೂಜಿಲೆಂಡ್ ಮ್ಯಾಚ್ ಇದೆ ಇವತ್ತು. ಇಂಡಿಯಾಗೆ ಆಲ್ ದಿ ಬೆಸ್ಟ್. ನಮ್ಮ ದೇಶಕ್ಕೆ ಗೆಲುವು ಸಿಗಲಿ. ನಾನು ಕೂಡ ಕ್ರಿಕೆಟ್ ಅಭಿಮಾನಿ. ನಮ್ಮ ಟೀಮ್ ಇಂಡಿಯಾ ಚೆನ್ನಾಗಿ ಆಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದರು.