ಚಾಮರಾಜನಗರ: ಆನೆ ದಾಳಿಗೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಕುಳ್ಳೂರು ಗ್ರಾಮದ ಜಡಿಯ ಊರುಫ್ ಜಡಿಯಾಗೌಡ ಮೃತ ದುರ್ಧೈವಿಯಾಗಿದ್ದು, ಬಿ.ಆರ್.ಟಿ.ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ.
ರಾಮಪುರ ಗಸ್ತು ಅರಣ್ಯ ಗಡಿಯಿಂದ 1km ದೂರದಲ್ಲಿ ಸುವರ್ಣಾವತಿ ಹಿನ್ನೀರಿನ ಸುಂಡ್ರೆ ಹಳ್ಳ ಆರಣ್ಯ ಪ್ರದೇಶದಲ್ಲಿ ಆನೆ ದಾಳಿ ಮಾಡಿದೆ. ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ಬಿ.ಆರ್.ಟಿ.ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಅಧಿಕಾರಿಗಳು ಹಾಗೂ ಪೂರ್ವ ಪೋಲೀಸ್ ಠಾಣೆಯ ಪೋಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.