ಚಾಮರಾಜನಗರ:- ಹನೂರು ತಾಲೂಕಿನ ಗಡಿ ಭಾಗವಾದ ಗರಿಕೆಕಂಡಿ ಹಾಗೂ ಬರಗೂರು ಸಮೀಪ ನಡೆದ ಲಾರಿ ಅಪಘಾತದಲ್ಲಿ ನರಸೀಪುರ ಮೂಲದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸಾವನ್ನಪ್ಪಿದ್ದ ವ್ಯಕ್ತಿ ಟಿ.ನರಸೀಪುರ ಮೂಲದ ನಯುಂ (35) ಎಂಬಾತನಾಗಿದ್ದಾನೆ.
ತಮಿಳುನಾಡಿನ ತೂತುಕುಡಿಯಿಂದ ಮೈಸೂರು ಕಡೆಗೆ ರಸಗೊಬ್ಬರ ತುಂಬಿಕೊಂಡು ಬರುತ್ತಿದ್ದಾಗ ಲಾರಿ ಗರಿಕೆಕಂಡಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಹಿನ್ನಲೆ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ತಮಿಳುನಾಡು ರಾಜ್ಯದ ಬರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಂದಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.