ಚಾಮರಾಜನಗರ:- ಜಿಲ್ಲೆಯ ಹನೂರು ತಾಲ್ಲೂಕಿನ ಮಿಣ್ಯಂ ಗ್ರಾಮ ಪಂಚಾಯಿತಿಯ ಕೊಪ್ಪ ಗ್ರಾಮದಿಂದ ಅರಣ್ಯರಸ್ತೆಯಲ್ಲಿ ಒಡೆಯರಪಾಳ್ಳಕೆ ತೆರಳುತ್ತಿದ್ದ ಸ್ನೇಹಿತರ ಮೇಲೆ ಕಾಡಾನೆಯೊಂದು ಭೀಕರವಾಗಿ ದಾಳಿ ನಡೆಸಿದೆ.
ರಸ್ತೆಯಲ್ಲಿ ದಿಡೀರನೆ ಎದುರಾದ ಕಾಡಾನೆ ದಾಳಿಯಿಂದ ಇಬ್ಬರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಫಲಕಾರಿಯಾಗದೆ ಆನೆ ದಾಳಿಯಿಂದ ಸ್ಥಳದಲ್ಲಿಯೇ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ.
ಕಾಡಾನೆ ದಾಳಿಗೆ ಸ್ಥಳದಲ್ಲಿಯೇ ಮೃತ ಪಟ್ಟ ವ್ಯಕ್ತಿ
ಕೊಪ್ಪ ಗ್ರಾಮದ ಮುನಿಯಪ್ಪ (೪೦) ಎಂದು ತಿಳಿದುಬಂದಿದ್ದು
ಆತನ ಸ್ನೇಹಿತ ಕುಳ್ಳುಚ್ಚನಿಗೂ ಗಂಭೀರವಾದ ಗಾಯಗಳಾಗಿ ಅರಣ್ಯದೊಳಗೆ ಪ್ರಜ್ನಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಎನ್ನಲಾಗಿದೆ
ಈ ವೇಳೆ ಅರಣ್ಯದೊಳಗೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಮನಿಸಿ, ಗಾಯಗೊಂಡ ಕುಳ್ಳುಚ್ಚನನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ, ಕುಳ್ಳುಚ್ಚ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.