ಚಾಮರಾಜನಗರ:- ಕಳೆದ ಒಂದು ವಾರದಿಂದ ಪೈಪ್ ಒಡೆದು ಕುಡಿಯುವ ನೀರು ಪೋಲಾಗ್ತಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಜರುಗಿದೆ.
ಮಳವಳ್ಳಿ ಗೇಟ್ ಸಮೀಪ ಪೈಪ್ ಲೈನ್ ಒಡೆದು ನೀರು ಪೋಲಾಗ್ತಿದೆ. ಇತ್ತ ಗುಂಡ್ಲುಪೇಟೆ ಪಟ್ಟಣದಲ್ಲಿ ಒಂದು ವಾರದಿಂದ ಕಬಿನಿ ನೀರಿಲ್ಲದೆ ದಿನನಿತ್ಯ ನೀರಿಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ.
ಇತ್ತ ಕುಡಿಯುವ ನೀರು ಪೋಲಾಗ್ತಿದೆ. ನೀರಿನ ಬವಣೆ ಉಂಟಾಗಿದ್ರು ನಿರ್ಲಕ್ಷ್ಯ ತೋರುತ್ತಿರುವ ಪುರಸಭಾ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ರಸ್ತೆ ಬದಿಯಲ್ಲಿ ಗುಂಡ್ಲುಪೇಟೆಗೆ ಸರಬರಾಜಾಗ ಬೇಕಿದ್ದ ನೀರು ಹರಿದು ಹೋಗುತ್ತಿದೆ. ಮಳವಳ್ಳಿ ಗ್ರಾಮದ ರೈತ ಶಿವಕುಮಾರ್ ಎಂಬುವರ ಜಮೀನಿಗೂ ನೀರು ನುಗ್ತಿದೆ. ನೀರು ಜಮೀನಿಗೆ ನುಗ್ಗೋದ್ರಿಂದ ಈರುಳ್ಳಿ ಬೆಳೆ ನಾಶ ಆಗುತ್ತೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಮಳವಳ್ಳಿ ಗ್ರಾಮದ ರೈತ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.