ಹೊಸ ವರ್ಷದ ಪ್ರಯುಕ್ತ ಪವಾಡ ಪುರುಷ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಮಾದಪ್ಪನ ಭಕ್ತರ ಕಾರು ಕೆರೆಗೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಕುಂತೂರು ಕೆರೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಬಳಿಯ ಕೆರೆಯಲ್ಲಿ ನಿನ್ನೆ ತಡ ರಾತ್ರಿ ಘಟನೆ ನಡೆದಿದೆ.
Chanakya Niti: ನಿಮಗಿರುವ ಕಷ್ಟಗಳನ್ನು ಎದುರಿಸಲು ಚಾಣಕ್ಯ ಹೇಳಿದ ಈ 10 ವಿಷಯಗಳನ್ನು ನೆನಪಿಡಿ ಸಾಕು.!
ಘಟನೆ ವಿವರ:
ಮೈಸೂರಿನಲ್ಲಿ ಟೆಲಿಕಾಲರ್ ಆಗಿ ಕೆಲಸ ಮಾಡುತ್ತಿದ್ದ ಶುಭಾ ಮತ್ತು ಕಾರು ಚಾಲಕ ಊರ್ಜಿತ್ ಮೃತಪಟ್ಟಿದ್ದಾರೆ. ಖಾಸಗಿ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿರುವ ಮನಿತ್ ಎಂಬವರನ್ನು ರಕ್ಷಿಸಲಾಗಿದೆ. ಶುಭಾ ಮತ್ತು ಮನಿತ್ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ತಡರಾತ್ರಿ ಕಾರು ನಿಯಂತ್ರಣ ತಪ್ಪಿ ಕುಂತೂರು ಬಳಿಯ ಕೆರೆಗೆ ಉರುಳಿದೆ
ಮನಿತ್ ಕಾರಿನ ಬಾನೆಟ್ ಮೇಲೆ ನಿಂತು ಕೂಗುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮನಿತ್ನನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಆದರೆ ಶುಭಾ ಹಾಗೂ ಊರ್ಜಿತ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಂಬಳ್ಳಿ ಪೊಲೀಸರು ಶವಗಳನ್ನು ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.