ಚಾಮರಾಜನಗರ: ಶಾಲಾ ಮಕ್ಕಳನ್ನು ಹೊತ್ತ ಆಟೋ ಮತ್ತು ಸ್ಕೂಟಿ ನಡುವೆ ರಸ್ತೆ ಅಪಘಾತವಾಗಿ ಶಾಲೆಗೆ ತೆರಳಬೇಕಿದ್ದ ಬಾಲಕ ಮರಣವೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಂಗಲ ಹಾಗೂ ಕಾಮಗೆರೆ ಸಮೀಪ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಂಗಲ ಗ್ರಾಮದಿಂದ ಕಾಮಗೆರೆ ಗ್ರಾಮದ ಸೆಂಟ್ ಕ್ಲೇವಿಯರ್ ಶಾಲೆಯ 5 ನೇ ತರಗತಿ ಬಾಲಕ ವಿಮಲ್ ರಾಜ್ ಎಂದಿನಂತೆ ಆಟೋದಲ್ಲಿ ಶಾಲೆಗೆ ಹೋಗಬೇಕಾದ್ರೆ ಸ್ಕೂಟಿ ನಡುವೆ ಅಪಘಾತ ನಡೆದು ಆಟೋ ಪಲ್ಟಿಯಾಗಿದ್ದು, ಆಟೋದಲ್ಲಿದ್ದ ವಿಮಲ್ ರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತಿಬ್ಬರ ಭಾಲಕರಿಗೆ ಗಂಭೀರ ಗಾಯವಾಗಿ ಸಮೀಪದ ಕಾಮಗೆರೆ ಹೊಲಿಕ್ರಾಸ್ ಆಸ್ಪತ್ರೆ ದಾಖಲು ಮಾಡಿದ್ದಾರೆ.
ಆಟೋ ಪಲ್ಟಿಯಾಗಿ ಶಾಲಾ ಬಾಲಕ ಸಾವನ್ನಪ್ಪಿದ್ದ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂಧನ ಮುಗಿಲು ಮುಟ್ಟುವಂತ್ತಿತ್ತು.