ಚಾಮರಾಜನಗರ: ಬೆಳಂಬೆಳಗ್ಗೆ ಕಾಡಿನಿಂದ ಹೊರಬಂದ ಒಂಟಿಸಲಗವೊಂದು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಪಡಿಸಿ ರೈತರಲ್ಲಿ ಆತಂಕ ಮೂಡಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯದಾಮದ ಕಾಡಂಚಿನ ಗ್ರಾಮಗಳಾದ ನಕ್ಕುಂದಿ ಯರಂಭಾಡಿ ಮಾರ್ಗದಲ್ಲಿ ನಡೆದಿದೆ.
ನಿತ್ಯ ಟ್ಯಾಂಕ್ ನೀರಲ್ಲಿ ಸ್ನಾನ ಮಾಡ್ತಿದ್ದೀರಾ? ಹುಷಾರ್, ಹಾರ್ಟ್ ಅಟ್ಯಾಕ್ ಗ್ಯಾರಂಟಿ ಅಂತಿದ್ದಾರೆ ವೈದ್ಯರು!
ಇತ್ತೀಚೆಗ ಚಾಮರಾಜನಗರ ಜಿಲ್ಲೆಯಲ್ಲಿ ವನ್ಯ ಮೃಗಗಳ ಕಾಟ ಹೆಚ್ಚಾಗಿದೆ. ಅದರಲ್ಲೂ ಆನೆಗಳ ಹಾವಳಿ ಮಿತಿಮೀರಿದೆ.
ಇಂದು ಮುಂಜಾನೆ ಹನೂರು ತಾಲೂಕಿನ ನಕ್ಕುಂದಿ ಯರಂಭಾಡಿ ಗ್ರಾಮದ ಸುತ್ತಾಮುತ್ತಾ ಕಾಡಂಚಿನ ರಸ್ತೆ ಸಮೀಪದ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆ
ರೈತರು ಜಮೀನುಗಳಲ್ಲಿ ಬೆಳೆದಿದ್ದ ದ್ವಿದಳ ಧಾನ್ಯಗಳನ್ನು ನಾಶ ಪಡಿಸಿದೆ.
ಮುಂಜಾನೆ ಎಂದಿನಂತೆ ಜಮೀನಿಗೆ ತೆರಳಿದ್ದ ರೈತರಿಗೆ ಈ ಘಟನೆ ಎದುರಾಗಿದೆ. ಒಂಟಿ ಸಲಗದ ಅಡ್ಡಾಟವನ್ನು ರೈತ ಯುವಕರು ತಮ್ಮ ಮೊಬೈಲಿನಲ್ಲಿಯೇ ಸರಿಬಹಿಡಿದು ಸಂಬಂಧ ಪಟ್ಟ ಅರಣ್ಯ ಇಲಾಖೆ ಸಿಬ್ಬಂಧಿಗಳಿಗೆ ರವಾನಿಸಿದ್ದಾರೆ. .
ಇದೀಗ ರೈತರು ಆನೆಕಂಡು ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದು ಕೂಡಲೆ ಆನೆಗಳ ಹಾವಳಿ ನಿಯಂತ್ರಿಸಲು ಕ್ರಮಕೈಗೊಳ್ಳಯವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.