ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ತಾವರಕಟ್ಟೆ ಮೋಳೆ ಗ್ರಾಮದಲ್ಲಿ ನಾಗರಹಾವು ಮತ್ತೊಂದು ನಾಗರಹಾವನ್ನು ನುಂಗಿರುವ ಅಪರೂಪದ ಘಟನೆಯ ನಡೆದಿದೆ.ತಾವರಕಟ್ಟೆಯ ಮಹೇಶ್ ರವರ ತೋಟದಲ್ಲಿ ಏಕಾಏಕಿ ನಾಗರಹಾವೊಂದು ಪ್ರತ್ಯಕ್ಷವಾಗಿದೆ.
ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಸ್ನೇಕ್ ಅಶೋಕ್ ರವರಿಗೆ ಮಾಹಿತಿ ನೀಡಿ ನಾಗರಹಾವನ್ನು ಸಂರಕ್ಷಿಸುವಂತೆ ತಿಳಿಸಿದ್ದಾರೆ. ಅಶೋಕ್ ರವರು ಘಟನಾ ಸ್ಥಳಕ್ಕೆ ತಲುಪಿ ನಾಗರಹಾವನ್ನು ನುಂಗಿದ ನಾಗರಹಾವನ್ನು ಹೊರ ತೆಗೆದಿದ್ದಾರೆ.
SBI ATM Franchise: ಈ ದಾಖಲೆಗಳು ಇದ್ರೆ ಸಾಕು.. ಪ್ರತಿ ತಿಂಗಳು 60 ಸಾವಿರ ರೂ.ವರೆಗೆ ಸಂಪಾದಿಸಬಹುದು..!
ಈ ಸಂದರ್ಭದಲ್ಲಿ ನುಂಗಿದ ಹಾವು ಉಸಿರಾಟದ ಸಮಸ್ಯೆಗಳಿಂದ ಮೃತಪಟ್ಟಿದ್ದನ್ನು ಗುರುತಿಸಿದರು. ಈ ಘಟನೆಯ ವೀಡಿಯೋ ಇದೀಗ ವೈರಲ್ ಆಗಿ ಹರಿದಾಡುತ್ತಿದೆ. ಈ ಘಟನೆಯಂತೂ ನಾಗರಹಾವುಗಳ ಆಹಾರದ ಅಭ್ಯಾಸಗಳನ್ನು ಮತ್ತು ಅಗತ್ಯಗಳನ್ನು ಕುರಿತಂತೆ ಹಲವು ಪ್ರಶ್ನೆಗಳನ್ನೂ ಉಂಟುಮಾಡುವಂತಿತ್ತು.