ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ಲೈನ್ ವೆಂಕಟೇಶ್ ಮೆಟ್ಟಿಲ ಮೇಲೆ ಕುಳಿತು ಕಾಟೇರ ಸಿನಿಮಾ ವೀಕ್ಷಿಸಿದ್ದಾರೆ.
ದರ್ಶನ್ ಅವರಿಂದ ಸ್ಫೂರ್ತಿ ಪಡೆದು ನಟನೆಗೆ ಬಂದಿರುವ ಧನ್ವೀರ್ ಕೂಡ ಆಗಮಿಸಿದ್ದರು. ನಟ ವಿನೋದ್ ಪ್ರಭಾಕರ್, ನಿರ್ದೇಶಕ ಯೋಗರಾಜ್ ಭಟ್, ನಟಿ ಮೇಘಾ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ, ಶ್ರುತಿ ಮೊದಲಾದ ಸೆಲೆಬ್ರಿಟಿಗಳು ಈ ಶೋ ವೀಕ್ಷಣೆಗೆ ಆಗಮಿಸಿದ್ದರು.
ಬಂದ ಎಲ್ಲಾ ಕಲಾವಿದರನ್ನು ದರ್ಶನ್ ಪ್ರೀತಿಯಿಂದ ಸ್ವಾಗತಿಸಿದರು. ಆ ಬಳಿಕ ದರ್ಶನ್ ಅವರು ಥಿಯೇಟರ್ ಒಳಗೆ ತೆರಳಿದರು. ದರ್ಶನ್, ರಾಕ್ಲೈನ್ ವೆಂಕಟೇಶ್ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ಈ ಫೋಟೋ ಫ್ಯಾನ್ಸ್ ವಲಯದಲ್ಲಿ ಹರಿದಾಡಿದೆ. ದರ್ಶನ್ ಯಾವಾಗಲೂ ಸಿಂಪಲ್ ಆಗಿ ಇರೋಕೆ ಇಷ್ಟ ಪಡುತ್ತಾರೆ. ಇದಕ್ಕೆ ಈ ಫೋಟೋ ಉತ್ತಮ ಉದಾಹರಣೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.