ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಜೈಲೂಟದಿಂದ ಇಂದು ಕೂಡ ಮುಕ್ತಿ ಸಿಕ್ಕಿಲ್ಲ ಇವತ್ತೊಂದಿನನೂ ಜೈಲೂಟವೇ ಗಟ್ಟಿಯಾಗಿದೆ ಯಾಕಂತೀರಾ ಮನೆ ಊ ಕ್ಕೆ ಹಾಕಿದ್ದ ಅರ್ಜಿ ನಾಳೆಗೆ ಮುಂದೂಡಿದ ಹೈ ಕೋರ್ಟ್
ಕೊಲೆ ಕೇಸ್ ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್ಗೆ ಮನೆಯೂಟ ಸಿಗುತ್ತಾ ಅಥವಾ ಜೈಲೂಟವೇ ಗತಿಯಾಗುತ್ತಾ ಎಂಬ ಭವಿಷ್ಯ ಹೈಕೋರ್ಟ್ನಲ್ಲಿ ಇಂದು ನಿರ್ಣಯ ಇದ್ದಿದ್ದು ನಾಳೆಗೆ ಮೂಂದೂಡಿಕೆಯಾಗಿದೆ.
ರೇಣುಕಾಸ್ವಾಮಿ ಮರ್ಡರ್ ಕೇಸ್: ಜೈಲೂಟದಿಂದ ದರ್ಶನ್ ಗೆ ಸಿಗುತ್ತಾ ಮುಕ್ತಿ!
ಜೈಲಲ್ಲಿ ತಿನ್ನುವ ಊಟ ಜೀರ್ಣ ಆಗುತ್ತಿಲ್ಲ. ಪದೇ ಪದೇ ಫುಡ್ ಪಾಯಿಸನ್ ಆಗುತ್ತಿದೆ. ಇದರಿಂದ ಆರೋಗ್ಯ ಸಮಸ್ಸೆ ಎದುರಾಗಿದೆ. ಹಾಗಾಗಿ ಮನೆಯಿಂದ ಊಟ ಪೂರೈಕೆ ಮಾಡಲು ಅನುಮತಿ ನೀಡಬೇಕು ಎಂದು ದರ್ಶನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಕಳೆದ ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜೈಲಿನ ಮ್ಯಾನ್ಯುವಲ್ ಅಲ್ಲಿ ಮನೆಯ ಊಟ ನೀಡುವುದಕ್ಕೆ ಇರುವ ಅವಕಾಶಗಳು ಏನೇನು? ಮತ್ತೆ ಜೈಲಿನಲ್ಲಿ ದರ್ಶನ್ ಅವರಿಗೆ ಆಗುತ್ತಾ ಇರುವ ಆರೋಗ್ಯ ಸಮಸ್ಸೆ ಎಂತದ್ದು ಅಂತಾ ಉತ್ತರ ನೀಡುವಂತೆ ಜೈಲಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿತ್ತು
ಅದರಂತೆ ಇಂದು ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು.ನಾಳೆಗೆ ವಿಚಾರಣೆ ಮುಂದೂಡಿಕೆ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಕುಮಾರ್ ಪೀಠದಲ್ಲಿ ನಡೆದ ವಿಚಾರಣೆ