ಬೆಂಗಳೂರು: ಬಿಜೆಪಿಯವರಿಗೆ ಸಣ್ಣ ವಿಷಯಕ್ಕೂ ರಾಜೀನಾಮೆ ಕೇಳೋದು ಚಾಳಿ ಎಂದು ಕೋನರೆಡ್ಡಿ ಹೇಳಿದ್ದಾರೆ.
ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ್ರಾ ದೀಪಿಕಾ ಪಡುಕೋಣೆ: ಹೇಗಿದ್ದಾಳೆ ಗೊತ್ತಾ ಮುದ್ದು ದುವಾ
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜೀನಾಮೆ ಕೇಳುವುದು ಬಿಜೆಪಿಯವ್ರ ಚಾಳಿ. ನಿಮಗೆ ಬೇರೆ ಏನೂ ಉದ್ಯೋಗ ಇಲ್ವ?ಇದೇ ರೀತಿ ಮಾಡಿ ಬೆಳಗಾವಿ ಅಧಿವೇಶನ ಹಾಳು ಮಾಡಿದ್ರು.ಬಿಜೆಪಿಯವ್ರು ಈ ಚಾಳಿ ಬಿಡಬೇಕು.ನಮ್ಮ ಜೊತೆ ನಿಂತು ಹತ್ತು ಮಂದಿ ಸೆಲ್ಫಿ ತೆಗೆಸಿಕೊಳ್ತಾರೆ.ಅವರನ್ನ ನಮ್ಮ ಆಪ್ತ, ನಮ್ಮ ಜೊತೆ ಇದ್ದ ಅಂದ್ರೆ ಆಗುತ್ತಾ?ಪ್ರಿಯಾಂಕ್ ಖರ್ಗೆ ಒಬ್ಬ ಮುತ್ಸದ್ದಿ ರಾಜಕಾರಣಿ.ಅವರು ಟೀಕೆ ಮಾಡ್ತಾರೆ ಅಂತ ರಾಜೀನಾಮೆ ಕೇಳ್ತೀರ..?ತಪ್ಪು ಮಾಡಿದ್ರೆ ರಾಜೀನಾಮೆ ಕೇಳಲಿ, ತಪ್ಪೇ ಮಾಡದಿದ್ರೆ ಏಕೆ ರಾಜೀನಾಮೆ ಕೊಡಬೇಕು.
ನಾನು ಮೂವತ್ತು ವರ್ಷ ರಾಜಕಾರಣ ಮಾಡಿದ್ದೇನೆ.ಇಂತಹ ವಿರೋಧ ಪಕ್ಷವನ್ನ ಎಲ್ಲೂ ನೋಡಿಲ್ಲ.ಹೊಸ ವರ್ಷಕ್ಕೆ ಬಿಜೆಪಿಯವ್ರಿಗೆ ಒಳ್ಳೆಯ ಬುದ್ದಿ ಕೊಡಲಿ ಅಂತ ಪ್ರಾರ್ಥನೆ ಮಾಡ್ತೇನೆ ಎಂದು ಪ್ರಿಯಾಂಕ್ ಖರ್ಗೆ ಪರ ಕೋನರೆಡ್ಡಿ ಬ್ಯಾಟಿಂಗ್ ಮಾಡಿದ್ದಾರೆ.