ಮೊದಲ ದಿನವೇ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಜಗಳ ಶುರುವಾಗಿದೆ. ಉಗ್ರಂ ಮಂಜು ಮತ್ತು ಚೈತ್ರಾ ಕುಂದಾಪುರ ಅವರ ನಡುವೆ ಕಿತ್ತಾಟ ಶುರುವಾಗಿದೆ. ಹೊರಗಡೆ ಇದ್ದಾಗ ಚೈತ್ರಾ ಕುಂದಾಪುರ ಅವರು ಅನೇಕ ವಿವಾದಗಳನ್ನು ಮಾಡಿಕೊಂಡಿದ್ದರು.
ಮಧುಮೇಹಿಗಳೇ ಗಮನಿಸಿ: ನಿಮಗೆ ಗೋಧಿ ಹಿಟ್ಟಿಗಿಂತ ರಾಗಿ ಹಿಟ್ಟು ಬೆಸ್ಟ್ ಅಂತೆ!
ಬಿಗ್ ಬಾಸ್ ಮನೆಯ ಒಳಗೆ ಅವರಿಂದಲೇ ಮೊದಲು ಜಗಳ ಆರಂಭ ಆಗುತ್ತದೆ ಎಂದು ಬಹುತೇಕರು ಊಹಿಸಿದ್ದರು. ಹಾಗೆಯೇ ಆಗಿದೆ.
ಬಿಗ್ ಬಾಸ್ ಮನೆ ಮೊದಲಿನಂತೆ ಇಲ್ಲ. ಈ ಸೀಸನ್ನಲ್ಲಿ ದೊಡ್ಮನೆ ಎರಡು ಭಾಗವಾಗಿದೆ. ಒಂದು ಭಾಗದಲ್ಲಿ ಸ್ವರ್ಗ ಇದೆ. ಇನ್ನೊಂದು ಭಾಗದಲ್ಲಿ ನರಕ ಇದೆ. ನರಕದಲ್ಲಿ ಇರುವವರಿಗೆ ಸವಲತ್ತುಗಳು ಕಡಿಮೆ. ಸದ್ಯಕ್ಕೆ ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಅನುಷಾ ರೈ, ಶಿಶಿರ್, ಮಾನಸಾ, ಮೋಕ್ಷಿತಾ ಪೈ ಮತ್ತು ರಂಜಿತ್ ಅವರು ನರಕವಾಸಿಗಳಾಗಿ ಬಿಗ್ ಬಾಸ್ನಲ್ಲಿ ಆಟ ಆರಂಭಿಸಿದ್ದಾರೆ.
ಉಗ್ರಂ ಮಂಜು, ಐಶ್ವರ್ಯಾ, ಹಂಸಾ, ತ್ರಿವಿಕ್ರಮ್, ಲಾಯರ್ ಜಗದೀಶ್, ಧರ್ಮ ಕೀರ್ತಿರಾಜ್, ಗೌತಮಿ ಜಾಧವ್, ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಅವರು ಸ್ವರ್ಗದಲ್ಲಿ ಸ್ಥಾನ ಪಡೆದಿದ್ದಾರೆ. ಆಟ ಶುರುವಾದ ಮೊದಲ ದಿನವೇ ಸ್ವರ್ಗ ವಾಸಿಗಳಿಗೆ ಹಾಗೂ ನರಕವಾಸಿಗಳಿಗೆ ಕಿತ್ತಾಟ ಆರಂಭ ಆಗಿದೆ. ಆಟದ ನಿಯಮಗಳ ವಿಚಾರದಲ್ಲಿ ಉಗ್ರಂ ಮಂಜು ಮತ್ತು ಚೈತ್ರಾ ಕುಂದಾಪುರ ಅವರ ನಡುವೆ ವಾದ ಆಗಿದೆ
ಚೈತ್ರಾ ಕುಂದಾಪುರ ನರಕದಲ್ಲಿ ಇರುವುದರಿಂದ ಅವರಿಗೆ ವಿಶೇಷ ಅಧಿಕಾರಗಳು ಇಲ್ಲ. ಆದರೆ ಅವರು ತಮ್ಮ ಮಿತಿಮಿತಿಗಳನ್ನು ಮೀರಿದಂತಿದೆ. ಮೊದಲ ದಿನದ ಝಲಕ್ ತೋರಿಸುವ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಅವರು ಕೂಗಾಡಿರುವುದು ಕಾಣಿಸಿದೆ. ‘ನೀವು ಮಾತನಾಡುವಂತಿಲ್ಲ’ ಎಂದು ಚೈತ್ರಾಗೆ ಉಗ್ರಂ ಮಂಜು ತಾಕೀತು ಮಾಡಿದ್ದಾರೆ. ‘ಮಾತನಾಡಬಾರದು ಅಂತ ರೂಲ್ ಬುಕ್ನಲ್ಲಿ ಇದ್ದರೆ ತೋರಿಸಿ, ನಾನು ಮಾತನಾಡಲ್ಲ’ ಎಂದು ಚೈತ್ರಾ ತಿರುಗೇಟು ನೀಡಿದ್ದಾರೆ