ಟೀಮ್ ಇಂಡಿಯಾ ಆಟಗಾರ ಯುಜ್ವೇಂದ್ರ ಚಹಲ್ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಪತ್ನಿ ಧನಶ್ರೀ ವರ್ಮಾ ಅವರಿಂದ ಚಹಲ್ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಸೆಲೆಬ್ರಿಟಿ ದಂಪತಿಗಳು ಬೇರ್ಪಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇದಾಗ್ಯೂ ಈ ಬಗ್ಗೆ ಚಹಲ್ ಆಗಲಿ, ಧನಶ್ರೀ ವರ್ಮಾ ಅವರಾಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ.
ಇದೀಗ ಈ ವದಂತಿಯು ಮಹತ್ವ ಪಡೆದುಕೊಳ್ಳುತ್ತಿದ್ದಂತೆ ಧನಶ್ರೀ ವರ್ಮಾ ಅವರು ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ಪತಿ ಚಾಹಲ್ ಸಹ ಮೌನ ಮುರಿದಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಚಾಹಲ್ ಊಹಾಪೋಹ ಹರಡದಂತೆ ಮನವಿ ಮಾಡಿದ್ದಾರೆ.
ಚಾಹಲ್ ಇನ್ಸ್ಟಾದಲ್ಲಿ ಏನಿದೆ?
ನನ್ನ ಎಲ್ಲಾ ಅಭಿಮಾನಿಗಳ ಅಚಲ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅಭಿಮಾನಿಗಳ ಬೆಂಬಲ ಇಲ್ಲದೇ ಇದ್ದಿದ್ದರೆ ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ. ಆದ್ರೆ ಪ್ರಯಾಣ ಇಲ್ಲಿಗೇ ಮುಗಿಯುವುದಿಲ್ಲ. ಒಬ್ಬ ಕ್ರೀಡಾಪಟುವಾಗಿ ಇನ್ನೂ ನನ್ನ ದೇಶ, ನನ್ನ ತಂಡ ಹಾಗೂ ನನ್ನ ಎಲ್ಲ ಅಭಿಮಾನಿಗಳಿಗಾಗಿ ಅದ್ಭುತ ಓವರ್ಗಳು ಬಾಕಿ ಉಳಿದಿವೆ.
ಆದ್ರೆ ಇತ್ತೀಚೆಗೆ ನಡೆಯುತ್ತಿರುವ ಘಟನೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅದರಲ್ಲೂ ನನ್ನ ವೈಯಕ್ತಿಕ ಜೀವನದ ಬಗ್ಗೆ ಜಾಲತಾಣದಲ್ಲಿ ಕಾಮೆಂಟ್ಗಳು ಹರಿದಾಡುತ್ತಿವೆ. ಅದರಲ್ಲಿ ಸತ್ಯವಾಗಿರಬಹುದಾದ ಮತ್ತು ಸತ್ಯವಲ್ಲದ ವಿಷಯಗಳ ವದಂತಿ ಹರಿದಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ.
Fashion Tips: ನೈಲ್ ಪಾಲಿಶ್ ಹಚ್ಚಿದ ತಕ್ಷಣ ಒಣಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ
ನಾನು ಒಬ್ಬ ಮಗ, ಸಹೋದರ ಹಾಗೂ ಸ್ನೇಹಿತನಾಗಿ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಯಾರೂ ಊಹಾಪೋಹಗಳಲ್ಲಿ ತೊಡಗಬೇಡಿ. ಇಂತಹ ಊಹಾಪೋಹಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾನೆ ನೋವಾಗಿದೆ. ನನ್ನ ಕುಟುಂಬ ಎಲ್ಲರಿಗೂ ಒಳ್ಳೆಯದನ್ನೇ ಬಯಸಲು ಕಲಿಸಿದೆ, ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸುವುದನ್ನೇ ಕಲಿಸಿದೆ.
ಹಾಗಾಗಿ ಜೀವನದಲ್ಲಿ ಅಡ್ಡದಾರಿಯಲ್ಲಿ ಸಾಗುವ ಬದಲು ನಾನು ನನ್ನ ಮೌಲ್ಯಗಳಿಗೆ ಬದ್ಧನಾಗಿರುತ್ತೇನೆ. ದೇವರ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಪಡೆಯಲು ನಾನು ಶಾಶ್ವತವಾಗಿ ಶ್ರಮಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.