ಹುಬ್ಬಳ್ಳಿ : ಸಾರಿಗೆ ಬಸ್ ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪ ಮಾಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಚಹಾದಲ್ಲಿ ಒಂದು ಸ್ಪೂನ್ ತುಪ್ಪ ಹಾಕಿಕೊಂಡು ಕುಡಿದರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಸಾರಿಗೆ ಬಸ್ ದರ ಏರಿಕೆ ಅನಿವಾರ್ಯವಿತ್ತು. ಬಸ್ ದರ ಏರಿಕೆಗೆ ಕಾರಣ ಕೂಡ ಇದ್ದನುದಿನಕ್ಕೆ 1.16 ಕೋಟಿ ಜನ ಪ್ರಯಾಣಿಸುತ್ತಾರೆ ಅದರಲ್ಲಿ 65 ಲಕ್ಷ ಜನ ಹೆಣ್ಣು ಮಕ್ಕಳಿದ್ದಾರೆ ಅದರ ಜೊತೆಗೆ 5,300 ಹೊಸ ಬಸ್ ಗಳನ್ನ ಖರೀದಿ ಮಾಡಿದ್ದೇವೆ. 8000 ಹೊಸ ಸಿಬ್ಬಂದಿಗಳನ್ನು ತೆಗೆದುಕೊಳ್ಳಲು ಫೈನಾನ್ಸ್ ಡಿಪಾರ್ಟ್ಮೆಂಟ್ ಅನುಮತಿ ಕೊಟ್ಟಿದೆ
ಈಗಾಗಲೇ ನಾಲ್ಕರಿಂದ ಐದು ಸಾವಿರ ಜನರನ್ನು ತೆಗೆದುಕೊಂಡಾಗಿದೆ.
ಹೀಗಾಗಿ ದರ ಏರಿಕೆ ಮಾಡಲಾಗಿದೆ ಆದರೆಬಿಜೆಪಿಯವರು ದರ ಏರಿಕೆಗೆ ಮಾತಾಡ್ತಾ ಇದ್ದಾರೆಚರ್ಚೆಗೆ ಬಂದ್ರೆ ಮಾತನಾಡೋಣ ಕೇಂದ್ರ ಸರ್ಕಾರ ಮನಸ್ಸು ಮಾಡಿದ್ರೆ ಡೀಸೆಲ್ ಅನ್ನು 30 ರಿಂದ 40 ರೂಪಾಯಿಗೆ ಕೊಡಬಹುದು
ಮನಮೋಹನ ಸಿಂಗ್ ಅವರು 103 ಡಾಲರ್ ಗೆ 1 ಬ್ಯಾರಲ್ ಖರೀದಿ ಮಾಡ್ತಿದ್ರು 90 ಸಾವಿರ ಕೋಟಿ ಸಬ್ಸಿಡಿ ಕೊಡ್ತಾ ಇದ್ರು ಇದರ ಜೊತೆಗೆ ಡಿಸೇಲ್ ಪೆಟ್ರೋಲ್ ಜಾಸ್ತಿಯಾದಾಗ ಎಲ್ಲ ವಸ್ತುಗಳು ದುಬಾರಿಯಾಗುತ್ತವೆ
ಸಾಗಾಟ ವೆಚ್ಚ ಜಾಸ್ತಿಯಾದಾಗ ಜನಸಾಮಾನ್ಯರ ಮೇಲೆ ಅದರ ಪರಿಣಾಮ ಆಗುತ್ತೆ 2004 ರಿಂದ 2014ರವರೆಗೆ 60 ರಿಂದ 56 ರೂಪಾಯಿಗೆ ನಾವು ಕೊಡ್ತಾ ಇದ್ದೇವೆ. ದೇಶದಲ್ಲಿ 25 – 30 ರೂಪಾಯಿಗೆ ಡೀಸೆಲ್, ಪೆಟ್ರೋಲ್ ಕೊಡಬಹುದು
ರಿಲಯನ್ಸ್ ಪೆಟ್ರೋಲ್ ಬಂಕ್ ಉಳಿಬೇಕು ಅನ್ನೋ ಉದ್ದೇಶದಿಂದ ಕೊಡ್ತಾ ಇಲ್ಲ ಕೇಂದ್ರದಲ್ಲಿ ಸಬ್ಸಿಡಿ ಜಾಸ್ತಿ ಮಾಡಿದರೆ ರಿಲಯನ್ಸ್ ಪೆಟ್ರೋಲ್ ಬಂಕ್ ನಮ್ಮೊಂದಿಗೆ ಕಾಂಪಿಟೇಷನ್ ಮಾಡಕ್ಕಾಗಲ್ಲ ಮಾಜಿ ಪ್ರಧಾನಿ ದಿ.
ಮನಮೋಹನ್ ಸಿಂಗ್ ಕೊಟ್ಟಂತಹ ಸಬ್ಸಿಡಿ ಕೊಟ್ರೆ ಭಾರತದಲ್ಲಿರುವಂತಹ ರಿಲಯನ್ಸ್ ಬ್ಯಾಂಕ್ ಎಲ್ಲ ಮುಚ್ಚಿ ಹೋಗುತ್ತವೆ ಸಬ್ಸಿಡಿ ಕೊಟ್ಟ ನಂತರ ನಮಗೆಲ್ಲರಿಗೂ ವಸ್ತುಗಳ ಬೆಲೆ ಕಡಿಮೆ ಆಗುತ್ತೆ ಎಲ್ಲದಕ್ಕೂ ಪ್ರತಿಭಟನೆ ಮಾಡುವ ಬಿಜೆಪಿಯವರು ಜಿಎಸ್ಟಿಗಾಗಿ ಯಾಕೆ ಪ್ರತಿಭಟನೆಮಾಡ್ತಿಲ್ಲ . ಹಣಕಾಸು ಸಚಿವೆನಿರ್ಮಲಾ ಸೀತಾರಾಮನ್ ಮೈ ಪ್ಯಾಜ್ ನಹಿ ಕಾತಿ ಹೂ ಅಂತ ಹೇಳಿದ್ರು
ಕೇಂದ್ರ ಹಣಕಾಸು ಸಚಿವರು ಹೀಗೆಹೇಳಬಹುದೇ..? ಬಿಜೆಪಿ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ ಎಂದ ಅವರು
ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಿತ್ತು ಕೊಳ್ಳುತ್ತಾ ಇದೆ ಎಂಬ ಆರೋಪಕ್ಕೆ ಲಾಡ್ ಪ್ರತಿಕ್ರಿಯೆ ಮಾಡಿದ ಅವರುನಾವು ಉಚಿತವಾಗಿ ಏನನ್ನಾದ್ರೂ ಕೊಡ್ತಾ ಇದ್ದೇವೆ. ಬಿಜೆಪಿಯವರು ಏನು ಕೊಟ್ಟಿದ್ದಾರೆ..? ಮೋದಿ ಕಿ ಗ್ಯಾರಂಟಿ ಅಂತ 80 ಕೋಟಿ ಜನರಿಗೆ ಅಕ್ಕಿ ಕೊಡ್ತಾ ಇದ್ದಾರಲ್ಲ..? ಇದನ್ನು ಯಾರು ಕೊಟ್ಟಿದ್ದು? ಈ ದೇಶದಲ್ಲಿ 1.10 ಲಕ್ಷ ಕೋಟಿ ಕೇಂದ್ರದಲ್ಲಿ ಬಜೆಟ್ ಇಟ್ಟು ಆಹಾರ ಭದ್ರತೆ ಕಾಯ್ದೆ ತಂದರು. ಆದ್ರೆ ಇವ್ರು 2 ರೂಪಾಯಿ ಸಬ್ಸಿಡಿ ಕೊಟ್ಟು, 20 ಸಾವಿರ ಕೋಟಿ ಪಬ್ಲಿಸಿಟಿ ತಗೊಂಡ್ರುಕೇಂದ್ರ ಸರ್ಕಾರ ತೈಲ ದರ ಇಳಿಸಿದರೆ, ಬಸ್ ದರ ತಾನಾಗಿಯೇ ಇಳಿಯುತ್ತೆ ಎಂದರು