ಬೆಂಗಳೂರು:- ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ವಿವಿ ಪುರಂ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಬಿಲ್ಡಿಂಗ್ ಮಾಲೀಕರು ನಿಯಮ ಗಾಳಿಗೆ ತೂರಿ ನಿರ್ಮಾಣ ಮಾಡುತ್ತಿದ್ದಾರೆ. ರಸ್ತೆಗೆ ಅಂಟಿಕೊಳ್ಳುವಂತೆ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದ್ದು, ರಸ್ತೆಯಲ್ಲೇ ಬಿಲ್ಡಿಂಗ್ ಸಾಮಗ್ರಿಗಳನ್ನ ಇಡಲಾಗಿದೆ. ಯಾವುದೇ ಸೇಫ್ಟಿ ಪ್ರಿಕಾಷನ್ ತೆಗೆದುಕೊಳ್ಳದೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ ಪಕ್ಕದಲ್ಲಿ ಯಾವುದೇ ವಸ್ತುಗಳು ಬೀಳದಂತೆ ನೆಟ್ ಕಟ್ಟಬೇಕಿತ್ತು.
ಆದರೆ ಅದೂ ಕೂಡ ಬಿಲ್ಡಿಂಗ್ ಮಾಲೀಕರು ಮಾಡಿಲ್ಲ. ಇನ್ನೂ ಪೊಲೀಸರು ಮಹಜರ್ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದೀಗ 8 ಜನ ಮಾಲೀಕರು, ಇಂಜಿನಿಯರ್ ಚಂದ್ರಶೇಖರ್ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ.
ಹೀಗಾಗಿ ಆರೋಪಿಗಳಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ.