ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ಬ್ರಿಡ್ಜ್ ನ ಸಿಮಂಟ್ ಬ್ರಿಕ್ಸ್ ಬಿದ್ದು ಕಾರ್ ನ ಗ್ಲಾಸ್ ಡ್ಯಾಮೇಜ್ ಆಗಿರುವ ಘಟನೆ ಮೈಸೂರು ರಸ್ತೆಯ ಪಿಲ್ಲರ್ ನಂಬರ್ ೩೯೩ ಬಳಿ ನಡೆದಿದೆ. ಮೈಸೂರು ರಸ್ತೆಯ ಬಳಿ ಮೆಟ್ರೋ ಬ್ರಿಡ್ಜ್ನಿಂದ ಸಿಮೆಂಟಿನ ಕಲ್ಲು ಕಳಚಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಬಿದ್ದ ಪರಿಣಾಮ ಕಾರಿನ ಮಾಲೀಕ ನಮ್ಮ ಮೆಟ್ರೋ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲಹಂಕದ ಬಾಗಲೂರಿನಿಂದ ಮೈಸೂರಿಗೆ ಕಾರ್ಯಕ್ರಮಕ್ಕೆ ನವೀನ್ ರಾಜ್ ಮತ್ತು ಕುಟುಂಬ ಹೋಗುತ್ತಿದ್ದಾಗ ಮೈಸೂರು ರಸ್ತೆಯ ಪಿಲ್ಲರ್ ನಂಬರ್ 393 ಬಳಿ ಈ ಘಟನೆ ನಡೆದಿದೆ. ಮೆಟ್ರೋ ರೈಲು ಹೋಗುತ್ತಿದ್ದಂತೆ ಅಲ್ಲಿನ ವೈಬ್ರೇಷನ್ಗೆ ಸಿಮೆಂಟ್ ಕಳಚಿ ಬಿದ್ದಿದೆ. ಖರೀದಿಸಿ ಒಂದು ತಿಂಗಳು ಕೂಡ ಆಗದ ಎಸ್ಯುವಿ 700 ಕಾರಿನ ಮುಂದಿನ ಗ್ಲಾಸ್ ಒಡೆದಿದ್ದು,
Chanakya Niti: ಮಹಿಳೆಯರ ಈ ಅಭ್ಯಾಸಗಳೇ ಇಡೀ ಕುಟುಂಬದ ನಾಶಕ್ಕೆ ಕಾರಣವಂತೆ..!
ಕಾರಿನ ಮೇಲ್ಭಾಗ ಹಾನಿಯಾಗಿದೆ. ಕಲ್ಲು ಬಿದ್ದ ರಭಸಕ್ಕೆ ಕಾರಿನಲ್ಲಿದ್ದವರು ಭಯಗೊಂಡಿದ್ದಾದರೂ ಪಾರಾಗಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ, ಮೆಟ್ರೋ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ಕಾರು ಮಾಲೀಕನಿಂದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ದಾರೆ.