ಹುಬ್ಬಳ್ಳಿ: ತಾಲ್ಲೂಕಿನ ನೋಲ್ವಿ ಗ್ರಾಮದ ಶ್ರೇಯಸ್ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ವಿಜ್ಞಾನಿಗಳ ವೇಷ ಭೂಷಣದ ಮೂಲಕ ಹಾಗೂ ಗಣಿತಜ್ಞರ ಸಂಶೋಧನೆಗಳ ಜೊತೆಗೆ ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಯಶಸ್ವಿಯಾಗಿ ನೆರವೇರಿಸಿದರು.
ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಸಿ ಎನ್ ಬಡ್ಡಿ ಹಾಗೂ ಡಿ. ಟಿ.ಅರಿಶಾನು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೇಯಸ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಎಂ ಬಿ ಖಾನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿ ಜಿ ಹಿರೇಮಠ್, ಎಸ್ ಎನ್ ಹನ್ನಿ, ಜಿ. ಬಿ ಪಾಟೀಲ್, ಐ ಎಸ್ ಪೂಜಾರ್ , ಮುಖ್ಯೋಪಾಧ್ಯಾಯರು ಶ್ರೀಮತಿ ರೀಟಾ ರೋಣದ ವಿಜ್ಞಾನದ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು ಕಾರ್ಯಕ್ರಮಕ್ಕೆ ಶಾಲೆಯ ಶಿಕ್ಷಕರುಂದದವರೆಲ್ಲರೂ ಉಪಸ್ಥಿತರಿದ್ದರು.