ಕನ್ನಡದ ನಟ ಡಾಲಿ ಧನಂಜಯ್ ಮೈಸೂರಿನಲ್ಲಿ ಅದ್ಧೂರಿಯಾಗಿ ಚಿತ್ರದುರ್ಗ ಮೂಲದ ಡಾ.ಧನ್ಯತಾ ಅವರನ್ನು ಮದುವೆಯಾಗಿದ್ದಾರೆ. ಗುರು ಹಿರಿಯರು, ಗಣ್ಯರು ಅಭಿಮಾನಿಗಳ ಸಮ್ಮುಖದಲ್ಲಿ ತಾಳಿ ಕಟ್ಟಿ ಹೊಸ ಜೀವನ ಆರಂಭಿಸಿದ್ದಾರೆ.
ಮೊನ್ನೆ ಅದ್ದೂರಿಯಾಗಿ ಆರತಕ್ಷತೆ, ನಿನ್ನೆ ಮಾಂಗಲ್ಯ ಧಾರಣೆ ನೆರವೇರಿದೆ. ಮೈಸೂರಿನ ವಸ್ತು ಪ್ರದರ್ಶನ ವೇದಿಕೆಯಲ್ಲಿ ಧನಂಜಯ್ ಹಾಗೂ ಧನ್ಯತಾ ಸತಿ, ಪತಿಗಳಾಗಿದ್ದಾರೆ.ಇದೀಗ ಧನ್ಯತಾರನ್ನು ಧನಂಜಯ್ ಕುಟುಂಬಸ್ಥರು ಅದ್ದೂರಿಯಾಗಿ ಮನೆ ತುಂಬಿಸಿಕೊಂಡಿದ್ದಾರೆ.
ಅರಸೀಕೆರೆಯ ಕಾಳೇನಹಳ್ಳಿ ನಿವಾಸಕ್ಕೆ ಬಂದ ನವಜೋಡಿಯನ್ನು ಕುಟುಂಬಸ್ಥರು ಸಂಭ್ರಮದಿಂದ ಮನೆ ತುಂಬಿಸಿಕೊಂಡಿದ್ದಾರೆ. ನೆನ್ನೆ ಸಂಜೆಯೇ ಮುದ್ದಿನ ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನಡೆದಿದ್ದು, ಸುಮಾರು 7 ಗಂಟೆಗೆ ಮನೆ ತುಂಬಿಸಿಕೊಳ್ಳಲಾಗಿದೆ. ಈ ವೇಳೆ ವೇಳೆ ಧನ್ಯತಾ ಹಾಗೂ ಡಾಲಿ ಕುಟುಂಬಸ್ಥರು ಹಾಜರಿದ್ದರು.