ಹುಬ್ಬಳ್ಳಿ:ಹುಟ್ಟುಹಬ್ಬ ಅಂದರೆ, ಮೊದಲು ನೆನಪಾಗುವುದು ಕೇಕ್, ಹೊಸ ಬಟ್ಟೆ, ಫ್ರೆಂಡ್ಸ್ ಜೊತೆ ಪಾರ್ಟಿ. ಅದರಲ್ಲಿಯೂ ಸಿನಿಮಾ , ಸೀರಿಯಲ್ ಸ್ಟಾರ್ ಗಳ ಹಾಡುಗಳ ಮೂಲಕ ಅದ್ದೂರಿಯಾಗಿ ಇರುತ್ತದೆ. ಇನ್ನು ಕೆಲವು ವಿದೇಶಕ್ಕೆ ಟ್ರಿಪ್ ಹೋಗುತ್ತಾರೆ. ಆದರೆ, ವಿಎಕೆ ಪೌಂಡೇಷನ್ ಅಧ್ಯಕ್ಷ,
ಹುಬ್ಬಳ್ಳಿ ಯುವ ನಾಯಕ ವೆಂಕಟೇಶ ಅಶೋಕ ಕಾಟವೆ ಅವರು ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ನೀಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿಕೊಂಡರು.ನಗರದ ವಿವಿಧ ಶಾಲೆಗಳಿಗೆ ಉಚಿತವಾಗಿ ಬಡ ಮಕ್ಕಳಿಗೆ ಶಾಲಾ ಬ್ಯಾಗ್ ನೀಡಿದರು. ಇನ್ನು ಅಂಧ ಮಕ್ಕಳಿಗೆ ಸಹ ಊಟ ಉಪಹಾರ ನೀಡಿದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಸಂತೋಷ ಚಹ್ಹಾನ ಇದ್ದರು.
Banana: ಸಿಪ್ಪೆ ಮೇಲೆ ಕಪ್ಪು ಚುಕ್ಕೆಗಳಿರೋ ಬಾಳೆಹಣ್ಣು ತಿನ್ನಬಹುದಾ..? ಇಲ್ಲಿದೆ ಮಾಹಿತಿ
ಇದರ ಜೊತೆಗೆ ಸಸಿ ನೆಡುವ ಮೂಲಕ ಸಹ ಜನ್ಮದಿನಾಚರಣೆ ಆಚರಿಸಿಕೊಂಡಿದ್ದು ವಿಶೇಷ. ನಂತರ ವೆಂಕಟೇಶ ಅಶೋಕ ಕಾಟವೆ ಅವರು ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ಪರಸ್ಪರ ಶುಭಾಶಯ ಹಂಚಿಕೊಂಡರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ,ವಿನಾಯಕ ಲದ್ವಾ, ಪ್ರಕಾಶ ಬುರಬುರೆ, ರಾಜು ಜರತಾರಘರ, ಮಿಥುನ ಚಹ್ಹಾನ್, ಗಣೇಶ ರಾಶಿನಕರ, ಸಚಿನ್ ಪೂಜಾರಿ, ಮುಂತಾದವರು ಭಾಗವಹಿಸಿದ್ದರು.