ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಮಲ್ಲಿಕಾರ್ಜುನ ಸಭಾಭವನದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಶಾಂತಿಪಾಲನಾ ಸಭೆ ನಡೆಯಿತು. ವರ್ಷಕ್ಕೊಮ್ಮೆ ಬರುವ ಬಹಳ ಮಹತ್ವದ ಹಬ್ಬ ಅದು ಹೋಳಿ ಹಬ್ಬ ಗುರುವಾರ ಬೆಳಿಗ್ಗೆ ಕಾಮಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ರಾತ್ರಿ 12 ಗಂಟೆಗೆ ಕಾಮದಹಣ ಮಾಡುವ ಸಂಪ್ರದಾಯ ಇಲ್ಲಿವರೆಗೂ ನಡೆದುಕೊಂಡು ಬಂದಿದೆ.
ಕಾಮದಹನ ಮಾಡುವ ಸಮಯದಲ್ಲಿ ಮೇಲ್ಗಡೆ ತಂತಿ ಅಳವಡಿಕೆ ಇರುವುದರಿಂದ ತಂತಿಗೆ ಯಾವುದೇ ರೀತಿ ಬೆಂಕಿ ಹತ್ತದ ಹಾಗೆ ಮತ್ತು ಅವಘಡ ಆಗದ ರೀತಿಯಲ್ಲಿ ಜಾಗೃತಿಯಿಂದ ಆಮಧಹಣ ಮಾಡಿ. ನಂತರ ಶುಕ್ರವಾರ ಬೆಳಗ್ಗೆ ಪರಸ್ಪರ ಒಬ್ಬರನ್ನೊಬ್ಬರು ಸೇರಿ ಬಣ್ಣ ಹಚ್ಚುವುದರ ಮುಖಾಂತರ ಹೋಳಿ ಹಬ್ಬ ಆಚರಣೆ ನಡೆಯುತ್ತದೆ.
ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು.? ಹೆಚ್ಚು ಕುಡಿದ್ರೆ ಏನಾಗುತ್ತೆ ಗೊತ್ತಾ.?
ಯಾವುದೇ ರೀತಿ ಅಹಿತಕರ ಘಟನೆ ನಡೆದ ಹಾಗೆ ಹಾಗೂ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಅದ್ದೂರಿಯಿಂದ ಸಂತೋಷದಿಂದ ಹೋಳಿ ಹಬ್ಬವನ್ನು ಆಚರಿಸಿ. ರಬಕವಿ ನಗರದ ಎಲ್ಲ ಜನರು ಸೇರಿ ಶಾಂತ ರೀತಿಯಿಂದ ಹೋಳಿ ಹಬ್ಬವನ್ನು ಆಚರಿಸಿ.
ಹೋಳಿ ಹಬ್ಬ ಇತಿಹಾಸದ ಪುಟ ಸೇರಿದೆ ಅದಕ್ಕೆ ಧಕ್ಕೆ ಬರದ ಹಾಗೆ ಮತ್ತು ಕಾನೂನಿನ ಅಡಿಯಲ್ಲಿ ಬೇರೆ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಶಾಂತ ರೀತಿಯಿಂದ ಹೋಳಿ ಹಬ್ಬವನ್ನು ಆಚರಿಸಿ ಎಂದು ತೇರದಾಳ ಪೊಲೀಸ್ ಠಾಣೆಯ ಪಿಎಸ್ಐ ಅಪ್ಪು ಐಗಳಿ ಹೇಳಿದರು.
ಇದೇ ಸಂದರ್ಭದಲ್ಲಿ ರಬಕವಿಯ ಹೊರ ಠಾಣೆಯ ಇಎಸ್ಐ ಕರಣ್ ರಜಪೂತ. ರಾಮಣ್ಣ ಹುಲಕುಂದ. ಧರೇಪ್ಪ ಉಳ್ಳಾಗಡ್ಡಿ. ಉಶ್ಮನ ಸಾಬ್ ಲಿಂಗ್ರೈ. ಸಂಜಯ ತೆಗ್ಗಿ. ಬಸವರಾಜ ಅಮ್ಮನಗಿಮಠ. ಮಹದೇವ ದೂಪದಾಳ. ಮಾರುತಿ ನಾಯಕ. ಈಶ್ವರ ನಾಗರಾಳ. ಪ್ರಭು ಪೂಜಾರಿ. ಪಿಜಿ ಕಾಖಂಡಿಕಿ ಮಾರುತಿ ಗಾಡಿವಡ್ಡರ ಸೇರಿದಂತೆ ಮುಂತಾದವರು ಪಾಲುಗೊಂಡಿದ್ದರು.