ಬೆಂಗಳೂರು: ಸರ್ಕಾರ ಹುಕ್ಕಾ ಬಾರ್ ಗಳನ್ನ ಬ್ಯಾನ್ ಮಾಡಿದ್ದೇ ತಡ ಸಿಸಿಬಿ ಮಹಾಬೇಟೆ ಶುರುವಾಗಿದೆ .ಅಕ್ರಮವಾಗಿ ಹುಕ್ಕಾ ಬಾರ್ ನಡೆಸ್ತದಿದ ಅವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಕೋಟಿ ಕೋಟಿ ಮೌಲ್ಯದ ನಿಕೋಟಿನ್ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.
ಸರ್ಕಾರ ರಾಜ್ಯದಲ್ಲಿ ಹುಕ್ಕಾ ಬಾರ್ ಗಳನ್ನ ಬಂದ್ ಮಡಿ ಆದೇಶ ಹೊರಡಿಸಿದೆ.ಅದಾಗಿಯೊ ಅಲ್ಲಲ್ಲಿ ಅಕ್ರಮವಾಗಿ ಹುಕ್ಕಾ ಸ್ಪಾಟ್ ಗಳು ತಲೆ ಎತ್ತಿವೆ..ನಿಷೇಧಿತ ತಂಬಾಕು ಪದಾರ್ಥಗಳನ್ನ ಮಾರಾಟ ಮಾಡಿ ಹಣ ಮಾಡ್ತಿವೆ.ಇಂತಹ ಅಕ್ರಮ ಹುಕ್ಕಾಬಾರ್ ಮೇಲೆ ಸಿಸಿಬಿ ಪೊಲೀಸರು ಸವಾರಿ ಮಾಡಿದ್ದಾರೆ.
Election Fight: ರಾಜ್ಯಸಭೆ, ಲೋಕಸಭೆ ಚುನಾವಣೆ: ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡುವಂತೆ ಒತ್ತಡ
ಅಬ್ಬಬ್ಬಾ ನೋಡಿದ್ರಾ ಗೋಡೌನ್ ನಲ್ಲಿ ಅದ್ಹೇಗೆ ಕಂತೆ ಕಂತೆಯಾಗಿ ತಂಬಾಕು ವಸ್ತುಗಳನ್ನ ಜೋಡಿಸಿಟ್ಟಿದ್ದಾರೆ ಅಂತಾ ಇದೆಲ್ಲ ಹುಕ್ಕಾ ಬಾರ್ ನಲ್ಲಿ ಬಳಸೊ ನಸರ್ಕಾರದಿಂದ ನಿಷೇಧ ಗೊಂಡಿರೊ ಅಫ್ಜಲ್ ಎಂಬ ಹೆಸರಿನ ಮೊಲಾಸಿಸ್,ದಿಲ್ ಬಾಗ್,ಜೆಡ್ ಎಲ್ -01,ಆಕ್ಷನ್ -7,ಬಾದ್ ಷಾ,ಮಹಾ ರಾಯಲ್ -717 ಉತ್ಪನ್ನಗಳು.ಇದೆಲ್ಲವನ್ನು ಹೆಚ್ಚಿನ ಹಣಕ್ಕೆ ಸಾರ್ವಜನಿಕರಿಗೆ ಮಾರಟ ಮಾಡಲಾಗ್ತಿತ್ತು..
ಚಾಮರಾಜಪೇಟೆ,ರಾಮಮೂರ್ತಿನಗರ,ಹಾಗೂ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಸಲಾಗ್ತಿದ್ದ ಹುಕ್ಕಾಬಾರ್ ಮೇಲೆ ದಾಳಿ ಮಡೆಸಿರುವ ಸಿಸಿಬಿ ಪಪೊಲೀಸರು ಮುರುಳಿಧರ್, ವಿ.ಪಿ ಸಿಂಗ್, ಆಂಥೋಣಿ, ಭರತ್, ಮಧು, ಹರಿಕೃಷ್ಣ, ರಮೇಶ್, ಲಕ್ಷ್ಮಿ , ಮಧು ಸೇರಿದಂತೆ 9 ಜನರನ್ನು ಬಂಧಿಸಿದ್ದು,ಸುಮಾರು 1 ಕೋಟಿ 45 ಲಕ್ಷ ಮೌಲ್ಯದ ತಂಬಾಕು ಉತ್ಪನ್ನ ಸೇರಿದಂತೆ 11 ಮೊಬೈಲ್ ,ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ
Loksabha Election: ಲೋಕಸಭೆ ಚುನಾವಣೆಗೆ ನಾನು ನಿಲ್ಲಲ್ಲ, ನಿಖಿಲ್ ಕೂಡ ನಿಲ್ಲಲ್ಲ: ಹೆಚ್.ಡಿ. ದೇವೇಗೌಡ ಸ್ಪಷ್ಟನೆ
ಕೇವಲ ಇದಿಷ್ಟೆ ನಗರದ ಮೂಲೆ ಮೂಲೆಯಲ್ಲು ಅಕ್ರಮ ಹುಕ್ಕಾ ಬಾರ್ ಗಳು ನಡೆಯುತ್ತಲೇ ಇದ್ದು ನಗರ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಹುಕ್ಕಾ ಬಾರ್ ಮುಕ್ತ ನಗರವನ್ನಾಗಿ ಮಾಡಬೇಕಾಗಿದೆ..