ಬೇಲೂರು:- ತಾಲೂಕಿನ ಅರೇಹಳ್ಳಿಯ ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ 27ರ ಚೀಕನಹಳ್ಳಿ ರಸ್ತೆಯ 8 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಸಿ.ಬಿ.ಟಿ ಗ್ರೂಪ್ಸ್ ವತಿಯಿಂದ ಪ್ರಪ್ರಥಮ ಬಾರಿಗೆ ಸುಸಜ್ಜಿತ ಮಲ್ಲಿಕಾರ್ಜುನ ನಗರ-ನಿಮ್ಮ ಕನಸು ನಿಮ್ಮ ಮನೆ ಉದ್ಘಾಟನೆಗೊಂಡಿದೆ.
ಹಾಸನ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ಮಾನ್ಯತೆ, ವಾಸ್ತು ಪ್ರಕಾರ ನಿರ್ಮಿತ ನಿವೇಶನ, ಕಾಫಿ ತೋಟ,ಗದ್ದೆಗಳಿಂದ ಸುತ್ತುವರೆದ ರಮಣೀಯ ನೈಸರ್ಗಿಕ ಪರಿಸರ, ಆಧುನಿಕ ಸೌಲಭ್ಯಗಳು, ಎಲ್ಇಡಿ ಬೀದಿ ದೀಪ,ಮಕ್ಕಳ ಆಟದ ಉದ್ಯಾನ,ಪಂಚಾಯತ್-ಎ ಖಾತಾ, ಹೆಚ್ ಡಿ ಪಿ ಇ ಕುಡಿಯುವ ನೀರು ಸರಬರಾಜು, ವಿಶಾಲ ಕಾಂಕ್ರಿಟ್ ರಸ್ತೆ, ಆಧುನಿಕ ವಿನ್ಯಾಸದ ಒಳ ಚರಂಡಿ ಹಾಗೂ ಸಂಸ್ಕರಣಾ ಘಟಕ ಸೇರಿದಂತೆ ಹಲವಾರು ವಿಶೇಷತೆಗಳನ್ನು ಈ ನೂತನ ಬಡಾವಣೆಯು ಹೊಂದಿದೆ. ಹಾಸನದ ಅಂಬಳೆ ರಾಜೇಶ್ವರಿ ಮತ್ತು ತಂಡದವರು ಭರತನಾಟ್ಯ ಹಾಗೂ ಜನಪದ ನೃತ್ಯ ಪ್ರದರ್ಶನ ನಡೆಸಿಕೊಟ್ಟರು.
ಮುರುಳೀಧರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಮಾರಂಭದಲ್ಲಿ ಹಲವು ಮುಖಂಡರು ಭಾಗಿಯಾಗಿದರು.