ಬೆಂಗಳೂರು:– ಡಿಕೆಶಿ ವಿರುದ್ಧದ CBI ತನಿಖೆ ವಾಪಸ್ ವಿಚಾರವಾಗಿ ವಿಪಕ್ಷ ನಾಯಕ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣ ವಾಪಸ್ ಪ್ರಸ್ತಾವನೆ ವಿಚಾರ ‘ಪ್ರಕರಣ ಕೋರ್ಟ್ನಲ್ಲಿದೆ, ಇದು ಕಾನೂನಿಗೆ ವಿರುದ್ಧವಾದುದು.
‘ಸಿಬಿಐ ತನಿಖೆಗೆ ನೀಡಿರುವುದು ತಪ್ಪು ಎಂದು ಅಪೀಲು ಹೋಗಿದ್ದರು. ಕೋರ್ಟ್ನಿಂದ ತೀರ್ಪು ಬರುವ ಮೊದಲು ನಿರ್ಧಾರ ಸರಿಯಲ್ಲ. ಸರ್ಕಾರ ಬದಲಾದಾಗ ಎಲ್ಲರೂ ಹಾಗೆ ಮಾಡುತ್ತಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.