ಗದಗ:- ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ CBI ತನಿಖೆ ವಾಪಸ್ ವಿಚಾರವಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ಕೇಸ್ ವಿಚಾರದ ಸಂಪುಟ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ಹಿಂದಿನ ಸರ್ಕಾರ ಕಾನೂನು ಬಾಹಿರವಾಗಿ ತನಿಖೆಗೆ ಕೊಟ್ಟಿತ್ತು. ಕಾನೂನಿನ ಪ್ರಕಾರ ಸರಿಯಾಗಿ ಇರಲಿಲ್ಲ. ಸಂಪುಟ ನಿರ್ಣಯದ ಆದೇಶ ಹೊರಡಿಸಿದ ನಂತರ ಸೂಕ್ತ ಮಾಹಿತಿ ಸಿಗಲಿದೆ..
ಸ್ಪೀಕರ ಅನುಮತಿ ಇರಲಿಲ್ಲ, ಅಡ್ವೆಕೆಟ್ ಜನರಲ್ ಅಭಿಪ್ರಾಯದಂತಿಲ್ಲ.ಲಿಖಿತ ಆದೇಶ ಇರಲಿಲ್ಲ.. ಇವೆಲ್ಲ ಕಾನೂನು ಬಾಹೀರ ಹೆಜ್ಜೆಗಳು. ಹೀಗಾಗಿ ಆಗಿನ ಸರ್ಕಾರದ ನಿರ್ಣಯವನ್ನ ಸಂಪುಟ ತಿರಸ್ಕಾರ ಮಾಡಿದೆ.ಕೋರ್ಟ್ ನಲ್ಲಿ ಇರುವಾಗ ಮಾಡ್ಬಾರ್ದು ಅಂತಾ ನಿರ್ಬಂಧ ಇಲ್ಲ. ಸಚಿವ ಸಂಪುಟ ತನ್ನ ವ್ಯಾಪ್ತಿಯಲ್ಲಿ ಏನ್ ನಿರ್ಣಯ ಮಾಡ್ಬಹುದಿತ್ತೊ ಆ ನಿರ್ಣಯ ಮಾಡಿದೆ ಎಂದರು
ಲೋಕಸಭೆ ಚುನಾವಣೆಗೆ ಹಿರಿಯ ಸಚಿವರನ್ನ ಕಣಕ್ಕಿಳಿಸುವ ವಿಚಾರವಾಗಿ ಮಾತನಾಡಿ, ನನ್ನ ಹೆಸರು ಪ್ರಸ್ತಾಪವಾಗಿರುವ ವಿಚಾರ ಗೊತ್ತಿಲ್ಲ.. ಹೈಕಮಾಂಡ್ ನಿರ್ಣಯವನ್ನ ಎಲ್ಲ ಕಾರ್ಯಕರ್ತರು ಕೇಳಬೇಕಾಗುತ್ತದೆ. ಪ್ರಶ್ನೆ ನಮ್ಮ ಎದುರು ಇಲ್ಲದಿರುವಾಗ ಮಾತ್ನಾಡೋದು ಸರಿ ಅಲ್ಲ ಎಂದರು