ಹುಬ್ಬಳ್ಳಿ; ಉತ್ತರ ಕರ್ನಾಟಕದ ಪ್ರಮುಖ ಬಹುವಿಶೇಷತೆಗಳ ಆಸ್ಪತ್ರೆಯಾದ ಎಚ್ಸಿಜಿ ಕೆಎಲ್ಇ ಸುಚಿರಾಯು ಆಸ್ಪತ್ರೆ ಇತ್ತೀಚೆಗೆ ೬೦ ವರ್ಷದ ಇರ್ಫಾನ್ (ಹೆಸರು ಬದಲಾಯಿಸಲಾಗಿದೆ) ಎಂಬ ವ್ಯಕ್ತಿಗೆ ಸವಾಲೆಸೆಯುವಂತಹ ಹಾಗೂ ಸಂಕೀರ್ಣವಾದ ಸ್ಪೆöÊ ಚೋಲ್ ಏಂಜಿಯೋಸ್ಕೋಪಿ ಕ್ರಮದ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡುವುದರೊಂದಿಗೆ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ಮೈಲಿಗಲ್ಲಾಗುವಂತಹ ಸಾಧನೆಗೈದಿದೆ. ರೋಗಿಯನ್ನು ಆಸ್ಪತ್ರೆಯಲ್ಲಿ ಸಂಕೀರ್ಣ ತೊಂದರೆಯ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಯಿತು.
ರೋಗಿಯು ಬಹಳ ಕಠಿಣವಾದ ಸಾಮಾನ್ಯ ಪಿತ್ತರಸ ನಾಳ (ಸಿಬಿಡಿ) ಕಲ್ಲಿನ ತೊಂದರೆಯಿಂದ ಬಳಲುತ್ತಿದ್ದನು. ಅಪರೂಪದ ಮತ್ತು ಚಿಕಿತ್ಸೆ ನೀಡುವಲ್ಲಿ ಕಷ್ಟಕರವಾದ ಪಿತ್ತರಸ ನಾಳದ ಸಮಸ್ಯೆಯಲ್ಲಿ ಎರಡು ಗಟ್ಟಿಯಾದ ಕಲ್ಲುಗಳು ಅಂಟಿಕೊAಡಿದ್ದವು. ಜೊತೆಗೆ ಇದು ಎಡ ಹೆಪಾಟಿಕ್ ನಾಳದಲ್ಲೂ ಕಲ್ಲುಗಳಿದ್ದವು. ಹುಬ್ಬಳ್ಳಿಯ ಸರ್ಕಾರಿ ವೃತ್ತಿಯಲ್ಲಿದ್ದ ಇರ್ಫಾನ್ (ಹೆಸರು ಬದಲಾಯಿಸಲಾಗಿದೆ) ನಾಲ್ಕು ತಿಂಗಳ ಹಿಂದೆ ಸಂಕೀರ್ಣವಾದ ವೈದ್ಯಕೀಯ ಸವಾಲನ್ನು ಎದುರಿಸಿದ್ದರಲ್ಲದೇ ಆಗಾಗ್ಗೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು.
ತಜ್ಞರನ್ನು ಸಂಪರ್ಕಿಸಿದಾಗ ಅವರು ಸಿಬಿಡಿ ಕಲ್ಲಿನಿಂದ ಬಳಲುತ್ತಿದ್ದಾರೆ ಎಂದು ರೋಗನಿರ್ಣಯದಲ್ಲಿ ಕಂಡುಬಂದಿತ್ತು. ಅವರು ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆಗಳು ಮತ್ತು ಇಆರ್ಸಿಪಿ ಕ್ರಮಗಳಿಗೆ ಒಳಗಾದರು, ಆದರೆ ಸಾಮಾನ್ಯ ಪಿತ್ತರಸ ನಾಳ (ಸಿಬಿಡಿ) ಕಲ್ಲುಗಳನ್ನು ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗೆ ಬೆಂಗಳೂರಿಗೆ ಹೋಗುವಂತೆ ಸೂಚಿಸಲಾಗಿತ್ತು. ಆದರೆ ಡಾ. ವಿಶ್ವಾಸ್ ಪೈ ಅವರ ಸಲಹೆಯಂತೆ ರೋಗಿಯು ಎಚ್ಸಿಜಿ ಕೆಎಲ್ಇ ಸುಚಿರಾಯು ಆಸ್ಪತ್ರೆಗೆ ಹೋಗಲು ನಿರ್ಧರಿಸಿದರು. ಪ್ರ
ಕರಣವನ್ನು ವಿವರವಾಗಿ ಮೌಲ್ಯೀಕರಿಸಿದ ನಂತರ, ಅವರನ್ನು ಡಾ. ಸಂದೀಪ್ ಕುಂಬಾರ್ ಅವರನ್ನು ಸಂಪರ್ಕಿಸುವಂತೆ ಸೂಚಿಸಲಾಯಿತು. ಅವರು ನಿಖರವಾದ ಒಂದು ಗಂಟೆಯ ಅವಧಿಯ ಸ್ಪೆöÊ ಚೋಲ್ ಆಂಜಿಯೋಸ್ಕೋಪಿ ಕ್ರಮ ನಡೆಸಲು ನಿರ್ಧರಿಸಿದರು. ರೋಗಿಯ ಸಮಸ್ಯೆಯಲ್ಲಿನ ಸಂಕೀರ್ಣತೆಗಳನ್ನು ಗಮನಿಸಿ, ಇಆರ್ಸಿಪಿ ಮತ್ತು ಸ್ಪೆಏ ಚೋಲ್ ಏಂಜಿಯೋಸ್ಕೋಪಿ ಕ್ರಮಗಳನ್ನು ಕೈಗೊಳ್ಳಲಾಯಿತು. ತಜ್ಞರ ತಂಡವು ಕಲ್ಲುಗಳ ಸ್ಥಾನವನ್ನು ಪತ್ತೆಹಚ್ಚಲು ಸುಧಾರಿತ ಇಮೇಜಿಂಗ್ ಪರೀಕ್ಷೆಗಳನ್ನು ಬಳಸಿತು. ರೋಗಿಯ ಸ್ಥಿತಿಯನ್ನು ಗಮನಿಸಿ ಅತ್ಯಂತ ಕಡಿಮೆ ಆಕ್ರಮಣಕಾರಿ, ಹೆಚ್ಚು ನಿಖರÀ ಕ್ರಮ ನಡೆಸಲಾಯಿತು.
ಈ ಪ್ರಕ್ರಿಯೆ ಇರ್ಫಾನ್ಗೆ ಹೊಸ ಭರವಸೆಯ ಭಾವ ಮೂಡಿಸಿತ್ತು. ಸಂಕೀರ್ಣ ಪಚನಾಂಗ ವ್ಯವಸ್ಥೆ ಸಂಬAಧಿತ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಆಸ್ಪತ್ರೆಯ ಪರಿಣತಿಗೆ ಸಾಕ್ಷಿಯಾಗಿದೆ. ಈ ವೈದ್ಯಕೀಯ ಕ್ರಮವನ್ನು ಡಾ. ಕುಂಬಾರ್ ಮತ್ತು ಡಾ. ಚಂಟಿ ಅವರು ಯಶಸ್ವಿಯಾಗಿ ನಿರ್ವಹಿಸಿದರು. ಹುಬ್ಬಳ್ಳಿಯ ಎಚ್ಸಿಜಿ ಕೆಎಲ್ಇ ಸುಚಿರಾಯು ಆಸ್ಪತ್ರೆಯ ಪಚನಾಂಗ ರೋಗಶಾಸ್ತ್ರಸಲಹಾತಜ್ಞರಾದ ಡಾ. ಸಂದೀಪ್ ಕುಂಬಾರ್ ಅವರು ಪ್ರಕರಣ ಕುರಿತಂತೆ ತಮ್ಮ ಆಲೋಚನೆ ಹಂಚಿಕೊAಡು ಮಾತನಾಡಿ,
“ ಇರ್ಫಾನ್ ಅವರನ್ನು ಸಂಕೀರ್ಣ ವೈದ್ಯಕೀಯ ಸ್ಥಿತಿಯೊಂದಿಗೆ ಎಚ್ಸಿಜಿಗೆ ಕರೆತರಲಾಯಿತು. ಅವರು ಎರಡು ಪಿತ್ತಜನಕಾಂಗದ ಕಲ್ಲುಗಳನ್ನು ಹೊಂದಿದ್ದರು, ಒಂದನ್ನು ಸಿಬಿಡಿಯಲ್ಲಿ ಇನ್ನೊಂದು ಎಡ ಯಕೃತ್ತಿನ ನಾಳದೊಳಗೆ ಆಳವಾಗಿ ಸೇರಿಕೊಂಡಿತ್ತು. ಇದು ಅಪರೂಪದ ಸಂಯೋಜನೆಯಾಗಿತ್ತಲ್ಲದೇ ಕೇವಲ ಶೇ. ೧ರಿಂದ ೫ರಷ್ಟು ಪ್ರಕರಣಗಳಲ್ಲಿ ಕಂಡುಬರುತ್ತದೆ. ಇದು ನಮಗೆ ಒಂದು ಅನನ್ಯ ಸವಾಲು ಒಡ್ಡುವಂಥದ್ದಾಗಿತ್ತು.
ಕಲ್ಲುಗಳ ಸಂಕೀರ್ಣ ಮತ್ತು ಅಡಗಿದ್ದ ಸ್ಥಾನಗಳ ಕಾರಣದಿಂದಾಗಿ ಸಾಂಪ್ರದಾಯಿಕ ಇಆರ್ಸಿಪಿ ಒಂದು ಆಯ್ಕೆಯಾಗಿರಲಿಲ್ಲ. ಇಆರ್ಸಿಪಿಯ ಮಿತಿಗಳನ್ನು ಗುರುತಿಸಿ, ನಾವು ಅತ್ಯಾಧುನಿಕ ಸ್ಪೆöÊ ಚೋಲ್ ಏಂಜಿಯೋಸ್ಕೋಪಿ ಆರಿಸಿಕೊಂಡಿದ್ದೇವೆ. ಇದು ಒಂದು ಸಂಕೀರ್ಣ ಕಾರ್ಯವಿಧಾನವಾಗಿದ್ದು ಅದನ್ನು ನಿರ್ವಹಿಸುವಾಗ ಹೆಚ್ಚಿನ ನಿಖರತೆಯ ಅಗತ್ಯವಿರುತ್ತದೆ. ಶ್ರೀ ಇರ್ಫಾನ್ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಸಾಮಾನ್ಯ ಸ್ಥಿತಿಗೆ ಮರಳಿದ್ದಾರೆ” ಎಂದರು.
ಹುಬ್ಬಳ್ಳಿಯ ಎಚ್ಸಿಜಿ ಕೆಎಲ್ಇ ಸುಚಿರಾಯು ಆಸ್ಪತ್ರೆಯ ಪಚನಾಂಗ ರೋಗಶಾಸ್ತç ಸಲಹಾತಜ್ಞರಾದ ಡಾ. ಸಂಜೀವ್ ಚಟ್ನಿ ಅವರು ಪ್ರಕರಣ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊAಡು ಮಾತನಾಡಿ, “ನಾವು ಎದುರಿಸಿದ ಅತ್ಯಂತ ಜಟಿಲವಾದ ಪ್ರಕರಣ ಇರ್ಫಾನ್ ಅವರದ್ದು ಸ್ಪೆö ಚೋಲ್ ಆಂಜಿಯೋಸ್ಕೋಪಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿಖರ ಕೌಶಲ್ಯ ಮತ್ತು ನಿಖರತೆಯ ಅಗತ್ಯವಿರುತ್ತದೆ. ಇಆರ್ಸಿಪಿ ಜೊತೆಗೆ ಈ ತಂತ್ರವನ್ನು ಯಶಸ್ವಿಯಾಗಿ ಬಳಕೆಯು ನಮ್ಮ ಸಂಯುಕ್ತ ಪರಿಣತಿಯ ಬಲ ಹಾಗೂ ರೋಗಿಗಳ ಅತ್ಯುತ್ತಮ ಆರೈಕೆಗೆ ಬದ್ಧತೆಗಳನ್ನು ಪ್ರದರ್ಶಿಸಿದೆ. ನಮ್ಮ ಅತ್ಯಾಧುನಿಕ ರೋಗನಿರ್ಣಯ ವ್ಯವಸ್ಥೆ ಮತ್ತು ಚಿಕಿತ್ಸಾ ಸಾಧನಗಳ ಬೆಂಬಲದೊಂದಿಗೆ, ನಾವು ಗಮನಾರ್ಹವಾದ ಪ್ರಗತಿ ಸಾಧಿಸಿದ್ದೇವೆ ಎಂದು ನಾವು ನಂಬುತ್ತೇವೆ” ಎಂದರು.
ಇರ್ಫಾನ್ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿ ಮಾತನಾಡಿ, “ನನ್ನ ಸವಾಲಿನ ವೈದ್ಯಕೀಯ ಸ್ಥಿತಿಯನ್ನು ಪರಿಹರಿಸಲು ನನಗೆ ಸಹಾಯ ಮಾಡಿದ ಎಚ್ಸಿಜಿ ಕೆಎಲ್ಇ ಸುಚಿರಾಯು ಆಸ್ಪತ್ರೆ ಮತ್ತು ಇಲ್ಲಿನ ವೈದ್ಯರ ತಂಡಕ್ಕೆ ನಾನು ಹೃದಯದಾಳದಿಂದ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ವೈದ್ಯಕೀಯ ತಂಡದ ಅಸಾಧಾರಣ ಕಾಳಜಿ ಮತ್ತು ದೃಢವಾದ ಬೆಂಬಲಗಳು ಈ ಕಷ್ಟದ ಸಮಯದಲ್ಲಿ ಸಾಂತ್ವನ ತಂದಿತು. ನಾನು ಪ್ರಾಮಾಣಿಕವಾಗಿ ಅವರ ಬದ್ಧತೆಯನ್ನು ಶ್ಲಾಘಿಸಿಸುತ್ತೇನಲ್ಲದೇ, ಇದು ಆರೋಗ್ಯಸೇವಾ ವ್ಯವಸ್ಥೆಯಲ್ಲಿ ನನ್ನ ನಂಬಿಕೆಯನ್ನು ಪುನಃಸ್ಥಾಪಿಸಿದೆ” ಎಂದರು.