ಮಸಾಲೆಗಳ ರಾಣಿ ಎಂದೂ ಕರೆಯಲ್ಪಡುವ ಅರಿಶಿನವನ್ನು ಸಾಮಾನ್ಯವಾಗಿ ಅತ್ಯುತ್ತಮ ಪೌಷ್ಟಿಕಾಂಶದ ಪೂರಕಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದು ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್, ಆಂಟಿವೈರಲ್, ಆಂಟಿಕಾರ್ಸಿನೋಜೆನಿಕ್ ಮತ್ತು ಉರಿಯೂತಕ್ಕೂ ರಾಮಬಾಣವಾಗಿದೆ. ಇದು ವಿಟಮಿನ್ ಸಿ, ಇ ಮತ್ತು ಕೆ ಜೊತೆಗೆ ಫೈಬರ್, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಹೇರಳವಾದ ಪೋಷಕಾಂಶಗಳನ್ನು ಹೊಂದಿದೆ.
ಸರ್ಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನೋಡಿ ನೋಡಿ ಬೇಜಾರಾಗಿದೆ: ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ!
ಮದುವೆಯ ಹಿಂದಿನ ದಿನ ಅರಶಿನ ಶಾಸ್ತ್ರಕ್ಕೂ ಇದು ಬಹಳ ಮುಖ್ಯವಾಗಿದೆ. ಮುತ್ತೈದೆಯರ ಅರಶಿನ-ಕುಂಕುಮ ಭಾಗ್ಯಕ್ಕೂ ಅರಶಿನ ಬೇಕೇ ಬೇಕು. ಹೀಗೆ ದೈನಂದಿನ ನಮ್ಮ ಜೀವನದಲ್ಲಿ ಅರಶಿನ ಇರಲೇಬೇಕು. ಸಾವಿರಾರು ವರ್ಷಗಳಿಂದ ಪ್ರಾಚೀನ ಭಾರತೀಯ ಮಸಾಲೆಯು ಆಯುರ್ವೇದದಿಂದ ನಂಬಲ್ಪಟ್ಟಿದೆ. ನಾವು ಬಳಸುವ ಸಾಂಬಾರ ಪದಾರ್ಥಗಳು ಔಷಧೀಯ ಗುಣವುಳ್ಳವುಗಳಾಗಿವೆ. ಅರಶಿನ ಕೂಡ ಬಹಳ ಪ್ರಯೋಜನಕಾರಿಯಾಗಿದೆ. ಇದು ಉರಿಯೂತ ಮತ್ತು ಸೋಂಕುಗಳನ್ನು ತಡೆಗಟ್ಟುವುದು, ಕ್ಯಾನ್ಸರ್, ಜೀರ್ಣಕಾರಿ ಸಮಸ್ಯೆಗಳನ್ನು ಸರಾಗಗೊಳಿಸುವುದು, ನೋವುಗಳನ್ನು ನಿವಾರಿಸಲು, ಚರ್ಮದ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಹಲವು ಅದ್ಭುತಗಳನ್ನು ಇದು ಒಳಗೊಂಡಿದೆ. ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಇದನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ಅತಿಯಾಗಿ ಸೇವಿಸಿದರೆ ವಿಷಕಾರಿಯಾಗಿ ಬದಲಾಗುವ ಸಾಧ್ಯತೆಯಿದೆ. ಕಚ್ಚಾ ಅರಿಶಿನವು ಅಂಥಾ ತೊಂದರೆಯುಂಟು ಮಾಡುವುದಿಲ್ಲ. ಶುದ್ಧೀಕರಿಸಿದ ಕರ್ಕ್ಯುಮಿನ್ ಮತ್ತು ಇತರ ಆಲ್ಕಲಾಯ್ಡ್ಗಳನ್ನು ಒಳಗೊಂಡಿರುವ ಅರಿಶಿನವನ್ನು ಎಚ್ಚರಿಕೆಯಿಂದ ಬಳಸಬೇಕು.
ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಅರಶಿನವು ಬಹಳ ಪ್ರಯೋಜನಕಾರಿಯಾಗಿದೆ. ಆದರೆ, ಈಗಾಗಲೇ ಕಡಿಮೆ ತೂಕವಿರುವವರು, ತೀವ್ರವಾದ ದೇಹದ ಶುಷ್ಕತೆ, ಮಲಬದ್ಧತೆ, ಒಣ ಮತ್ತು ಒರಟು ಚರ್ಮವನ್ನು ಹೊಂದಿರುವವರು ಇದನ್ನು ಹೆಚ್ಚು ಸೇವಿಸಬಾರದು. ತುಪ್ಪ ಮತ್ತು ಅರಿಶಿನ ಹಾಲು ನೈಸರ್ಗಿಕವಾಗಿ ನಿಮ್ಮ ಚರ್ಮದ ತೇವಾಂಶವನ್ನು ಸುಧಾರಿಸುತ್ತದೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ತ್ವಚೆಗೆ ಸುಂದರವಾದ ಹೊಳಪನ್ನು ನೀಡುತ್ತದೆ. ಅಲ್ಲದೆ, ಇದು ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಸಕ್ತ ಋತುವಿನಲ್ಲಿ ಸಾಮಾನ್ಯ ಸಮಸ್ಯೆ ಎಂದರೆ ನೆಗಡಿ, ಕೆಮ್ಮು, ಅಲರ್ಜಿ ಮತ್ತು ಜ್ವರ. ಹೀಗಾಗಿ ಹಾಲಿನೊಂದಿಗೆ ಅರಶಿನವನ್ನು ಬೆರೆಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಅರಿಶಿನದಲ್ಲಿನ ಸಕ್ರಿಯ ಘಟಕಾಂಶವಾದ ಕರ್ಕ್ಯುಮಿನ್ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಮತ್ತು ಮಧುಮೇಹದಿಂದ ಉಂಟಾಗುವ ಉರಿಯೂತದ ಪ್ರಕ್ರಿಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ನಿಮ್ಮ ಆಹಾರಕ್ಕೆ ಇದನ್ನು ಸೇರಿಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ.