ಬೆಂಗಳೂರು:- ಪಟಾಕಿ ಸಿಡಿಸುವಾಗ ಬಹಳ ಮುಂಜಾಗರೂಕತೆ ಮುಖ್ಯ ಎಂದು ಬೆಂಗಳೂರಿನ ಮಿಂಟೋ ಆಸ್ಪತ್ರೆಯ ನೇತ್ರ ತಜ್ಞರು ಕಿವಿಮಾತು ಹೇಳಿದ್ದಾರೆ.
ನಿಧಿಗಾಗಿ ಹೆತ್ತ ಮಗುವನ್ನು ಕೊಲ್ಲಲು ಮುಂದಾದ ತಂದೆ: ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಹೆಂಡ್ತಿ!
ಬೆಂಗಳೂರಿನಲ್ಲಿ ದೀಪಾವಳಿ ಸಂದರ್ಭ ಪ್ರತಿ ವರ್ಷ ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ಗಾಯ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ವರ್ಷ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಟಾಕಿ ಗಾಯಕ್ಕೆ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಹಬ್ಬದ ಸಮಯದಲ್ಲಿ 24/7 ಸೇವೆ ಒದಗಿಸಲು ಆಸ್ಪತ್ರೆ ಸಜ್ಜಾಗಿದೆ. ಸಂಭ್ರಮದಲ್ಲಿ ಪಟಾಕಿ ಸುಡುವಾಗ ಅವಘಡ ಸಂಭವಿಸಿ ಕಣ್ಣಿಗೆ ಆಗುವ ಗಾಯಕ್ಕೆ ಚಿಕಿತ್ಸೆ ನೀಡಲು ಆಸ್ಪತ್ರೆ ಸನ್ನದ್ಧವಾಗಿದೆ.
ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆಗೆ ಬರುವ ಮಕ್ಕಳಿಗಾಗಿ ಮಿಂಟೋ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಗಾಲಿದೆ. ತುರ್ತು ಚಿಕಿತ್ಸೆಗೆ ಬೇಕಾದ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಸಾಕಷ್ಟು ಔಷಧಗ, ಐ ಡ್ರಾಪ್ಸ್ಗಳನ್ನು ಎಲ್ಲ ವಾರ್ಡ್ಗಳಲ್ಲಿ ಶೇಖರಣೆ ಮಾಡಲಾಗಿದೆ.
ವರ್ಷದಿಂದ ವರ್ಷಕ್ಕೆ ಪಟಾಕಿ ಪ್ರಕರಣದ ಸಂತ್ರಸ್ತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಾಗುತ್ತಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮಿಂಟೋ ಆಸ್ಪತ್ರೆಯ ಸಿಬ್ಬಂದಿ ದೀಪಾವಳಿಯಲ್ಲಿ ರಜೆ ತೆಗೆದು ಕೊಳ್ಳದೇ ಕಾರ್ಯನಿರ್ವಹಿಸಲಿದ್ದಾರೆ.
ಪಟಾಕಿಯಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು 07 ಪುರುಷ 07 ಮಹಿಳಾ ಬೆಡ್ ಹಾಗೂ ಮಕ್ಕಳಿಗೆ ಪ್ರತ್ಯೇಕವಾದ ಬೆಡ್ ಮೀಸಲಿರಿಸಲಾಗಿದೆ. 08 ಎಮರ್ಜೆನ್ಸಿ ವಾರ್ಡ್ಗಳನ್ನೂ ಮೀಸಲಿರಿಸಲಾಗಿದೆ. ತುರ್ತು ಸರ್ಜರಿಗೂ ವ್ಯವಸ್ಥೆ ಮಾಡಲಾಗಿದೆ.
ಪಟಾಕಿ ಸಂಬಂಧಿತ ಅವಘಡ, ಗಾಯಾಳುಗಳಿಗಾಗಿ ಮಿಂಟೋ ಆಸ್ಪತ್ರೆ ತುರ್ತು ಸಹಾಯವಾಣಿ ಸಂಖ್ಯೆಯನ್ನೂ ತೆರೆದಿದೆ. ತುರ್ತು ಸಂದರ್ಭಗಳಲ್ಲಿ 9481740137 ಹಾಗೂ 08026707176 ಈ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.