ಬೀದರ್ : ಕರ್ನಾಟಕ ರಾಜ್ಯದ ಏಕೈಕ ಪಶು ವಿವಿಯಲ್ಲಿ ಜಾನುವಾರು ಕುಕ್ಕಟ ಮತ್ತು ಮತ್ಸ್ಯಮೇಳ 2025 ರ ಸಮಾರೋಪ ಸಮಾರಂಭ ನಡೆಯಿತು. ಕಳೆದ ಜ.17 ರಿಂದ 19ರ ವರೆಗೆ ನಡೆದ ಜಾನುವಾರು ಮೇಳದಲ್ಲಿ ಸರಿ ಸುಮಾರು ಒಂದೂವರೆ ಲಕ್ಷ ಜನರು ಭಾಗಿಯಾಗಿ ಜಾನುವಾರುಗಳ ಬಗ್ಗೆ ಮಾಹಿತಿ ಪಡೆದಿರೋದು ವಿಶೇಷ..
ಬೀದಿ ನಾಯಿಯ ಕೊಂದು ಆಟೋದಲ್ಲಿ ಎಳೆದೊಯ್ದ ದುಷ್ಟ ; ಯುವಕನ ದೂರಿಗೆ ಸ್ಪಂದಿಸಿದ ಮಾಜಿ ಕೇಂದ್ರ ಸಚಿವೆ
ಇನ್ನೂ ಮೂರು ದಿನಗಳ ಕಾಲ ನಡೆದ ಜಾನುವಾರು ಕುಕ್ಕಟ ಮತ್ತು ಮತ್ಸ್ಯಮೇಳದಲ್ಲಿ ಡಾಗ್ ಶೋ, ಫಲಪುಷ್ಪ ಪ್ರದರ್ಶನ ಗಮನ ಸೆಳೆಯಿತು. ಅಲ್ಲದೇ ಮೂರು ದಿನಗಳ ಕಾಲ ನಡೆದ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾಧಕರು ಭಾಗಿಯಾಗಿದ್ದರು. ಜಾನುವಾರು ಮೇಳಕ್ಕೆ ಆಗಮಿಸಿದ ಸಾಧಕರಿಗೆ ಜೊತೆಗೆ ಮೇಳ ಯಶಸ್ವಿ ಮಾಡಿದ ಅಧಿಕಾರಿಗಳ ಬಗ್ಗೆ ಪಶು ವಿವಿ ಕುಲಪತಿ ಕೆ.ಸಿ.ವೀರಣ್ಣ ಮೆಚ್ಚುಗೆಯ ಮಾತುಗಳನ್ನಾಡಿದರು.